ಉಡುಪಿ: ಕರಾವಳಿಗೆ ಆಗಮಿಸಿದ ಕನಕಪುರ ಬಂಡೆ ಡಿ ಕೆ ಶಿವಕುಮಾರ್ ಉಡುಪಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿರುವುದು ತಿಳಿದ ವಿಷಯವಾಗಿದ್ದು, ಈ ಕಾರ್ಯಕ್ರಮದಲ್ಲಿ ಕರಾವಳಿಯ ದೈವಾರಾಧನೆಯ ಪ್ರತೀಕವಾಗಿರುವ ಕಡ್ಸಲೆ (ದೈವದ ಖಡ್ಗ) ಯನ್ನು ನೀಡಿರುವುದು ಈಗ ಚರ್ಚೆಗೆ ಕಾರಣವಾಗಿದೆ.
ಡಿ ಕೆ ಶಿವಕುಮಾರ್ ಅವರಿಗೆ ಮುದ್ರಾಡಿ ಬ್ಲಾಕ್ ಕಾಂಗ್ರೆಸ್‌ನ ನಾಯಕ ಮಂಜುನಾಥ್ ಪೂಜಾರಿ ದೈವದ ಕಡ್ಸಲೆ ನೀಡಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.
ಪರ ವಿರೋಧ ಚರ್ಚೆ:
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಸಾಕಷ್ಟು ಸುದ್ದಿ ಮಾಡುತ್ತಿದ್ದು ಪರ ವಿರೋಧ ಗಳು ವ್ಯಕ್ತವಾಗಿದೆ. ಹಲವರು ವಿರೋಧ ವ್ಯಕ ಪಡಿಸಿದರೆ ಇನ್ನೂ ಹಲವರು ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿ ಕೊಳ್ಳುತ್ತಿದ್ದಾರೆ.