ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ದೇರಾಜೆ ಬೆಟ್ಟದಲ್ಲಿ ಕೊಡಮಣಿತ್ತಾಯ ದೈವ ಸಾನಿಧ್ಯದ ಜೀರ್ಣೋದ್ಧಾರದ ನಿಮಿತ್ತ ಶಿಲಾನ್ಯಾಸ ಕಾರ್ಯಕ್ರಮವೂ ಜು.7 ರಂದು ನಡೆಯಿತು.
ಈ ಕ್ಷೇತ್ರಕ್ಕೆ ಸುಮಾರು ೨೫೦ ವರ್ಷಗಳ ಇತಿಹಾಸವಿದೆ ಹಾಗೂ ಸುಮಾರು ನಲವತ್ತು ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ನೇಮೋತ್ಸವವು ನಡೆದಿದ್ದು, ನಂತರ ಕ್ಷೇತ್ರವು ಶಿಥಿಲಾವಸ್ಥೆಗೆ ತಲುಪಿತ್ತು. ಮರೋಡಿ ಗ್ರಾಮದ ಪೊಸರಡ್ಕ ಕೊಡಮಣಿತ್ತಾಯ ದೈವ ಹಾಗೂ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರದ ನಿಮಿತ್ತ ನಡೆದ ಪ್ರಶ್ನಾ ಚಿಂತನೆಯಲ್ಲಿ ..ಈ ಸಾನಿಧ್ಯವು ಕಂಡು ಬಂದಿದ್ದು ಇದರ ಜೀರ್ಣೋದ್ಧಾರ ಬಳಿಕ ಪೊಸರಡ್ಕ ಗರಡಿಯ ಜಿರ್ಣೋದ್ಧಾರವನ್ನು ನಡೆಸಬೇಕು ಎಂದು ತಿಳಿದು ಬಂದಿದ್ದು,ಕೊಡಮಣಿತ್ತಾಯ ದೈವದ ಪ್ರಮುಖ ಆರಾಧನ ಕೇಂದ್ರಗಳಲ್ಲಿ ದೇರಾಜೆ ಬೆಟ್ಟ ಕೊಡಮಣಿತ್ತಾಯ ದೈವದ ಕ್ಷೇತ್ರವು ಪ್ರಮುಖ ಸ್ಥಾನದಲ್ಲಿದೆ.
ಸುತ್ತ ಮುತ್ತ ವರ್ಣನೀಯ ಪ್ರಾಕೃತಿಕ ಸೌಂದರ್ಯದ ಮಡಿಲಲ್ಲಿ ಈ ಸಾನಿಧ್ಯವಿದ್ದು..ಇದರ ಜಿರ್ಣೋದ್ಧಾರ ಸಲುವಾಗಿ ಇಂದು ಶಿಲಾನ್ಯಾಸ ಕಾರ್ಯಕ್ರಮವನ್ನು ಊರಿನ ಗುರಿಕಾರರು ಹಾಗೂ ಗ್ರಾಮಸ್ಥರ ಕೂಡುವಿಕೆಯಲ್ಲಿ ಅನಂತ ಅಸ್ರಣ್ಣ ಕೇಳ ಬೊಟ್ಟ ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಈ ಸಂದರ್ಭ ಕ್ಷೇತ್ರದ ಜಿರ್ಣೋದ್ಧಾರದ ಮುಖ್ಯಸ್ಥರಾದ ಹೇಮರಾಜ್ ಬೆಳ್ಳಿಬೀಡು,ರಾಜೇಂದ್ರ ಬಳ್ಳಾಲ್ ಮಿತ್ತ ಬೀಡು, ಜೀನೇಂದ್ರ ಜೈನ್ ಆರಂಬೊಟ್ಟು, ಜಯವರ್ಮ ಬುಣ್ಣು ಕುಕ್ಯಾರೊಟ್ಟು, ಸುದರ್ಶನ್ ಜೈನ್ ಪಾಂಡಿಬೆಟ್ಟು ,ಶ ಉದಯ ನಾಪ, ಸೇಸಪ್ಪ ಪೂಜಾರಿ ಉಚ್ಚೂರು,ನಳಿನಿ ಪಿ.ಕೆ ಮತ್ತೊಟ್ಟು ,ರಮೇಶ್ ಬಲಾಂತ್ಯರೊಟ್ಟು ಹಾಗೂ , ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪದ್ಮಶ್ರೀ ಜೈನ್, ಪಂಚಾಯತ್ ಸದಸ್ಯರಾದ ಆಶೋಕ್ ಕೋಟ್ಯಾನ್ , ರತ್ನಾಕರ್ ಬುಣ್ಣನ್ , ಪತ್ರಕರ್ತರಾದ ಪ್ರದೀಶ್ ಹಾರೊದ್ದು ಉಪಸ್ಥಿತರಿದ್ದರು.