ಬೆಳ್ಳಾರೆ : ಮುಪ್ಪೇರಿಯ ಗ್ರಾಮದ ಪಜಿಂಬಿಲ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಡೆಯು ತ್ತಿದ್ದ ಕೋಳಿ ಅಂಕಕ್ಕೆ ಬೆಳ್ಳಾರೆ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಬೆಳ್ಳಾರೆ ಠಾಣಾ ಎಸ್‌ಐ ಈರಯ್ಯ ಡಿ.ಎನ್. ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾಳಿ ಮಾಡಿದಾಗ ಹಣ ಪಣಕ್ಕಿಟ್ಟು ಕೋಳಿ ಅಂಕ ನಡೆಸುತ್ತಿರುವುದು ಕಂಡು ಬಂದಿತ್ತು.
ಪೊಲೀಸರು ಬರುತ್ತಿದ್ದಂತೆ ಸುಮಾರು 10ರಿಂದ 15 ಮಂದಿ ಸ್ಥಳದಿಂದ ಓಡಿ ತಪ್ಪಿಸಿಕೊಂಡಿದ್ದಾರೆ.
ಮುರುಳ್ಯದ ಜಯಪ್ರಕಾಶ್ (38), ಸುಳ್ಯ ನಿವಾಸಿ ಸುದರ್ಶನ ಎಂ. (42), ಕಡಬ ಚಾರ್ವಾಕ ನಿವಾಸಿ ಜಯಪ್ರಕಾಶ್ (42) ಎಂಬವರನ್ನು ವಶಕ್ಕೆ ಪಡೆಯಲಾಗಿದೆ.
ಅಂಕದ ಕೋಳಿಗಳು, 1,350 ರೂ. ನಗದು, ಒಂದು ಕಾರು, 2 ಅಟೋ ರಿಕ್ಷಾ ಮತ್ತು 10 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























