ಮಂಗಳೂರು : ಪೌರತ್ವ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆಯ ಬಗ್ಗೆ, ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಪ್ರಚೋದನಕಾರಿ ಪೋಸ್ಟ್ ಹಾಕಿ ಸಾಮಾಜಿಕ ಜಾಲತಾಣದಲಿ ಹರಿಬಿಟ್ಟ ಆರೋಪಿಯೋರ್ವನನ್ನು ನಗರದ ಸೈಬರ್ ಕ್ರೈಂ ಪೊಲೀಸರು ಜು.2 ರಂದು ಬಂಧಿಸಿದ್ದಾರೆ.
ಬಂಧಿತನನ್ನು ಚಿತ್ರದುರ್ಗದ ಜಿಲ್ಲೆಯ ಹಿರಿಯೂರು ಪಾಲವ್ವನ ಹಳ್ಳಿಯ ಯೋಗೇಶ್. ಎಸ್ (28) ಎಂದು ಗುರುತಿಸಲಾಗಿದೆ.
ಈತ 2019 ರಲ್ಲಿ ಪೌರತ್ವ ಮಸೂದೆ ವಿರೋಧಿಸಿ ನಗರದಲ್ಲಿ ನಡೆದಿದ್ದ ಗಲಭೆಯ ಕುರಿತು ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ಪೊಲೀಸರ ಕುಟುಂಬಸ್ಥರ ಮನೆಯಲ್ಲಿ ಭಯ ಹುಟ್ಟಿಸಲು ಮಹಿಳೆಯ ಮಾನಕ್ಕೆ ಕುಂದು ಉಂಟು ಮಾಡುವ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡುವಂತ ಪೋಸ್ಟ್ ಹಾಕಿದ್ದ. ಇದನ್ನು ಫೇಸ್ ಬುಕ್ ಪೇಜ್ ಒಂದಕ್ಕೆ ಟ್ಯಾಗ್ ಮಾಡಿ ಅದರ ಸ್ಕ್ರೀನ್ ಶಾಟ್ ಫೇಸ್ ಬುಕ್ ಮೂಲಕ ಪ್ರಚಾರ ಮಾಡಿದ್ದ. ಈ ಪೋಸ್ಟ್ ವಿರುದ್ದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಬೆನ್ನು ಹತ್ತಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ, ೨ನೇ ಜೆ.ಎಮ್.ಎಫ್ ಸಿ ನ್ಯಾಯಾಲದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.