ಕೋಲಾರ: ಆಂಟಿ ಜೊತೆಗಿನ ಅನೈತಿಕ ಸಂಬಂಧವೇ ನವ ವಿವಾಹಿತನ ಬದುಕಿಗೆ ದುರಂತ ಅಂತ್ಯ ತಂದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಗರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಜಾಬೀರ್ ಕೊಲೆಯಾದ ನವ ವಿವಾಹಿತ. ತಂದೆಯ ದೂರದ ಸಂಬಂಧಿ ವಿವಾಹಿತ ಮಹಿಳೆ ಹಾಗೂ ಆತನ ಪ್ರೇಯಸಿ ಝಕಿಯಾ ನೀಡಿದ ಸುಪಾರಿಯಿಂದಲೇ ಕೊಲೆಯಾಗಿದೆ. ಮಗ ಕಾಣೆಯಾದ ಬಗ್ಗೆ ಜಾಬೀರ್ ಪೋಷಕರು ಕೋಲಾರದ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಕೊಲೆಯಾದ ಒಂದು ತಿಂಗಳ ನಂತರ ದೂರದ ಬೀದರ್ನ ನಿಡುವಂಚಿ ಗ್ರಾಮದ ಬಳಿ ಮಣ್ಣಲ್ಲಿ ಅವನ ಶವ ಪತ್ತೆಯಾಗಿದೆ.
ಜಾಬೀರ್ ಬೇರೆ ರಾಜ್ಯಗಳಿಂದ ಕಾರ್ಗಳನ್ನು ಖರೀದಿಸಿ ತಂದು ಮಾರಾಟ ಮಾಡುತ್ತಿದ್ದ. ಜೊತೆಗೆ ಬಾಡಿ ಬಿಲ್ಡಿಂಗ್ ಮಾಡುವುದು ಹವ್ಯಾಸವಾಗಿತ್ತು. ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ. ಆದರೆ ಝಕಿಯಾಗೆ ಇವನ ಮೇಲೆ ಮೋಹ ಹುಟ್ಟಿ, ಅನೈತಿಕ ಸಂಭಂದವೂ ಕೂಡ ಇತ್ತು ಎನ್ನಲಾಗಿದೆ.
ಜಾಬೀರ್ಗೆ ಅವನ ಮನೆಯವರು ಚಿಕ್ಕಬಳ್ಳಾಪುರದಲ್ಲಿ ಬೇರೊಬ್ಬ ಯುವತಿಯೊಂದಿಗೆ ಮದುವೆ ಮಾಡಿದ್ದರು. ಇದರಿಂದಾಗಿ ಝಕಿಯಾ ಕೋಪಗೊಂಡು ಜಾಬೀರ್ನನ್ನು ಕೊಲೆ ಮಾಡಿಸಲು ಪ್ಲಾನ್ ಮಾಡಿದ್ದಳು. ಅದರಂತೆ ನೆಪವೊಂದನ್ನು ಹೇಳಿ ಜಾಬೀರ್ನನ್ನು ಹೈದರಾಬಾದ್ಗೆ ಬರುವಂತೆ ಹೇಳಿದ್ದಳು. ಈ ವೇಳೆ ದಾರಿ ಮಧ್ಯೆ ಬೀದರ್ನ ನಿಡುವಂಚಿ ಗ್ರಾಮದ ಬಳಿ ಹಂತಕರು ದಾರುಣವಾಗಿ ಕೊಲೆ ಮಾಡಿದ್ದಾರೆ.