ವಿಟ್ಲ : ಮನೆಗೆ ಸಿಡಿಲು ಬಡಿದು ಅಪಾರ ಹಾನಿಯಾಗಿದ್ದು ಹಾಗೂ ಮನೆಯಲ್ಲಿದ್ದ ಮೂವರು ತೀವ್ರ ಆಘಾತಕ್ಕೆ ಒಳಗಾದ ಘಟನೆ ವಿಟ್ಲ ಸಮೀಪದ ಕೆಲಿಂಜದಲ್ಲಿ ಜು.7 ರಂದು ನಡೆದಿದೆ.
ವೀರಕಂಬ ಗ್ರಾಮದ ಕೆಲಿಂಜ ಕಲ್ಮಲೆಯ ರಘುನಾಥ ಶೆಟ್ಟಿಯವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಸಂಪರ್ಕ, ವಿದ್ಯುತ್ ಉಪಕರಣಗಳು ಸಂಪೂರ್ಣ ನಾಶವಾಗಿದೆ ಹಾಗೂ ಮನೆಯ ಗೋಡೆ ಬಿರುಕು ಬಿಟ್ಟಿದೆ. ಮನೆಯಲ್ಲಿದ್ದ ಅವರ ಪತ್ನಿ ಹಾಗೂ ಇಬ್ಬರು ಪುತ್ರಿಯರು ತೀವ್ರ ಆಘಾತಕ್ಕೆ ಒಳಗಾಗಿದ್ದು, ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.