ಮುಂಡೂರು: ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯಾದ ಸಂಭ್ರಮವನ್ನು ಭಾರತೀಯ ಜನತಾ ಪಾರ್ಟಿ ಮುಂಡೂರು ಗ್ರಾಮ ಸಮಿತಿ ಮತ್ತು ಶ್ರೀರಾಮ ಗೆಳೆಯರ ಬಳಗ ಪುತ್ತಿಲ ವತಿಯಿಂದ ಅಂಗವಿಕಲ ಮಗುವಿಗೆ ಬಟ್ಟೆ ಮತ್ತು ಸಿಹಿ ತಿಂಡಿಗಳನ್ನು ನೀಡುವ ಮೂಲಕ ಹಾಗೂ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ರವರು, ಭಾರತೀಯ ಜನತಾ ಪಾರ್ಟಿ ಯು ಅಧಿಕಾರದಲ್ಲಿ ಇರುವ ಸಂದರ್ಭದಲ್ಲಿ ಒಬ್ಬ ಸಚಿವೆಯಾಗಿ ಹೇಗೆ ಕಾರ್ಯವನ್ನು ನಿರ್ವಹಿಸಬೇಕು ಎನ್ನುವುದನ್ನು ಶೋಭಾ ಕರಂದ್ಲಾಜೆಯವರು ತೋರಿಸಿ ಕೊಟ್ಟಿದ್ದಾರೆ. ಪಕ್ಷ ಸಂಘಟನೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ, ಎಂಥಾ ಸಂಧಿಗ್ದ ಪರಿಸ್ಥಿತಿಯಲ್ಲೂ ಪಕ್ಷವನ್ನು ಬೆಳೆಸುವಲ್ಲಿ ಶಕ್ತಿ ಮೀರಿ ಪ್ರಯತ್ನ ಮಾಡಿದ್ದಾರೆ ಅಂತವರನ್ನ ಗುರುತಿಸಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಡೀ ದೇಶದಲ್ಲಿ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಮಹಿಳೆಗೆ ಗೌರವ ನೀಡಿ ಸಚಿವರನ್ನಾಗಿ ಮಾಡಿದ್ದಾರೆ ಅವರಿಗೆ ಪುತ್ತೂರು ಮಹಾಲಿಂಗೇಶ್ವರ ದೇವರು ಮತ್ತು ಊರಿನ ಜನತೆ ಸಹಕಾರವನ್ನು ನೀಡಿ ಕರ್ನಾಟಕದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ ನೀಡಲಿ ಎಂದರು.
ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ಪುತ್ತಿಲ, ಬಾಲಕೃಷ್ಣ ಕುರೆಮಜಲು, ಪುರಂದರ ಗೌಡ ಹಾಗೂ ಶ್ರೀರಾಮ ಗೆಳೆಯರ ಬಳಗದ ಉಪಾಧ್ಯಕ್ಷರಾದ ಹರೀಶ್ ನಾಯ್ಕ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.