ಸ್ಪೋರ್ಟ್ಸ್ಲೈನ್ ಪುತ್ತೂರು ಮತ್ತು ಟೆನ್ ಗಾಯ್ಸ್ ಉಬಾರ್ ಅರ್ಪಿಸುವ ಗ್ರೇಟ್ ಅಂಡರ್ ಆರ್ಮ್ ಟ್ರೋಫಿ 2020 ಕ್ರಿಕೆಟ್ ಪಂದ್ಯಾಟವು ಡಿ.13ರಂದು ಜೂನಿಯರ್ ಕಾಲೇಜು ಗ್ರೌಂಡ್ ಕೊಂಬೆಟ್ಟು ಪುತ್ತೂರಿನಲ್ಲಿ ನಡೆಯಲಿದೆ.
ಅಮೋಘ ಪ್ರಶಸ್ತಿಯ ಜತೆಗೆ ಪೋಲೀಸ್ 11 ಹಾಗೂ ಸುದ್ದಿ 11 ಮಧ್ಯೆ ರೋಚಕ ಪಂದ್ಯಾವಳಿ ನಡೆಯಲಿದ್ದು, ವಿಜೇತ ತಂಡಗಳಿಗೆ ಅಮೋಘ 30000 ಹಾಗೂ 20000 ನಗದು ಬಹುಮಾನದ ಜತೆಗೆ ಗ್ರೇಟ್ ಅಂಡರ್ ಆರ್ಮ್ ಟ್ರೋಫಿಯು ಟೆನ್ ಗಾಯ್ಸ್ ಉಬಾರ್ ಹಾಗೂ ಹ್ಯಾರಿಸ್ ಕಬಕ ಪ್ರಾಯೋಜಕತ್ವದಲ್ಲಿ ದೊರಕಲಿದ್ದು, ಕಾರ್ಯಕ್ರಮದಲ್ಲಿ ಸಾಧಕ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ. ಎರಡೂ ಮೈದಾನದ ರೋಚಕ ಪಂದ್ಯಾಟವು ZOOM.IN TV ಯಲ್ಲಿ ನೇರಪ್ರಸಾರಗೊಳ್ಳಲಿದೆ.
