ವಿಟ್ಲ : ಇಲ್ಲಿನ ಖಾಸಗಿ ಬಸ್ ಸ್ಟ್ಯಾಂಡ್ ನಲ್ಲಿರುವ ಹೀರಾ ಟವರ್ಸ್ ನ ಎರಡನೇ ಮಹಡಿಯಲ್ಲಿ ನ್ಯಾಯವಾದಿ ಫೌಝಿಯಾ ಪಿ. ಅವರ ಕಛೇರಿ ಹಾಗೂ ಪತಿ ಹಬೀಬ್ ಮಾಲಕತ್ವದ “ಡಿಜಿನೆಕ್ಸ್ಟ್” ಹೆಸರಿನ ಆನ್ ಲೈನ್ ಸೇವಾಕೇಂದ್ರ ಜು.12 ರಂದು ಉದ್ಘಾಟನೆಯಾಗಿದೆ. ವಿಟ್ಲದ ಹಿರಿಯ ದಸ್ತಾವೇಜು ಬರಹಗಾರ, ನ್ಯಾಯವಾದಿ ರವಿಶಂಕರ ಭಟ್ ಉದ್ಘಾಟಿಸಿದರು.
ಡಿಜಿನೆಕ್ಸ್ಟ್ ಸೇವಾಕೇಂದ್ರದಲ್ಲಿ ಪಾಸ್ ಪೋರ್ಟ್, ರೇಶನ್ ಕಾರ್ಡ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಭೂದಾಖಲೆಗಳು, ರಿಜಿಸ್ಟ್ರೇಷನ್, ಆದಾಯ ತೆರಿಗೆ(ITR) ದಾಖಲೆ, ಇನ್ಸೂರೆನ್ಸ್ ಪಾವತಿ, ಬಿಲ್ ಪಾವತಿ ವ್ಯವಸ್ಥೆ, ಸಿಸಿಟಿವಿ ಫಿಟ್ಟಿಂಗ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನೂ ಜನರ ಅನುಕೂಲಕ್ಕಾಗಿ ಒಂದೇ ಸೂರಿನಡಿಯಲ್ಲಿ ಒದಗಿಸುವುದು ನಮ್ಮ ಜವಾಬ್ದಾರಿ ಎಂದು ಮಾಲಿಕ ಹಬೀಬ್ ತಿಳಿಸಿದರು.