ಪುತ್ತೂರು : ಜಾತಿ ಮತ ವರ್ಣ ಬೇಧಗಳನ್ನು ಮರೆತು ಸ್ನೇಹ ಸೌಹಾರ್ದತೆಯಲ್ಲಿ ಬದುಕಲು ಕ್ರೀಡೆ ಒಂದು ಉತ್ತಮ ವೇದಿಕೆಯಾಗಿದ್ದು ಕ್ರಿಕೆಟ್ ಕೂಡ ಇದರಲ್ಲಿ ಒಂದಾಗಿದೆ. ಎಲ್ಲವನ್ನೂ ಮರೆತು ಸಹೋದರತ್ವ ವನ್ನು ಸಾರುವ ಕ್ರೀಡೆ. ಇಂತಹದೇ ಒಂದು ರೋಚಕ ಪಂದ್ಯಾಟಕ್ಕೆ ಪುತ್ತೂರು ಸಾಕ್ಷಿಯಾಗಲಿದೆ.
ಸಿಟಿ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಪುತ್ತೂರು, ಕ್ಲಾಸಿಕ್ ಫ್ರೆಂಡ್ಸ್ ಸೌದಿ ಅರೇಬಿಯಾ ಇದರ ಆಶ್ರಯದಲ್ಲಿ ಡಿ.23,24,25,26,27 ರಂದು 5 ದಿನಗಳ ರೋಚಕ ಕ್ರಿಕೆಟ್ ಪಂದ್ಯಾಟ ಪುತ್ತೂರಿನ ಹೃದಯ ಭಾಗವಾದ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ.10 ನೇ ವರ್ಷದ ಖ್ಯಾತಿಯ ಅಮರ್ ಅಕ್ಬರ್ ಅಂತೋನಿ ಎಂಬ ಸೌಹಾರ್ದತೆ ಸಾರುವ ಸೌಹಾರ್ದ ರೋಲಿಂಗ್ ಟ್ರೋಫಿ..ಗ್ರಾಮ ಗ್ರಾಮ ಗಳ ಪ್ರತಿಭೆಗಳಿಗೆ ವೇದಿಕೆ ನೀಡುವ ದೃಷ್ಟಿಯಲ್ಲಿ ಹಳ್ಳಿ ಹುಡುಗ್ರು ಪೇಟೆ ಕಪ್ .. ಸದಾ ಕೆಲಸದ ಒತ್ತಡದಿಂದ ಇರುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತುಸು ನೆಮ್ಮದಿ ಇಂದ ಮೈದಾನಕ್ಕೆ ಇಳಿದು ಸಂತಸದಿಂದ ಆಡಲು ವೇದಿಕೆಯಾಗಿ ಸ್ನೇಹ ಸೌಹಾರ್ದ ಟ್ರೋಫಿ.. ಪಂದ್ಯಾಟ ಗಳು ಪುತ್ತೂರಿನ ಕ್ರಿಕೆಟ್ ಪ್ರಿಯರ ಮನ ಗೆಲ್ಲ ಲಿದೆ.
ಕೊರೋನ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ.
ಕ್ರೀಡೆಯ ಜೊತೆಗೆ ಪಂದ್ಯಾಟದ ಸಂದರ್ಭದಲ್ಲಿ ಕೊರೋನ ಸಂದರ್ಭದಲ್ಲಿ ಶ್ರಮಿಸಿದ ಕೊರೋನ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ವೂ ನಡೆಯಲಿದೆ ಎಂದು ಆಯೋಜಕರು ಕ್ರೀಡಾ ಪ್ರೇಮಿಯೂ ಆಗಿರುವ ರಝಾಕ್ ಬಿ ಯಚ್ ಬಪ್ಪಳಿಗೆ ತಿಳಿಸಿದ್ದಾರೆ.
ZOOM.IN TV ಯಲ್ಲಿ ನೇರಪ್ರಸಾರ
5 ದಿನಗಳ ಕಾಲ ನಡೆಯುವ ಐತಿಹಾಸಿಕ ಪಂದ್ಯಾ ಕೂಟದ ನೇರಪ್ರಸಾರ ZOOM.IN TV ಯಲ್ಲಿ ಮೂಡಿ ಬರಲಿದೆ.