ಮಂಗಳೂರು, : ಮುಂಬೈಯಿಂದ ಬಂದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾಗಿರುವ ಮಹಿಳೆಯನ್ನು ಸೂರಿಂಜೆ ಬಳಿಯ ಪುಚ್ಚಾಡಿ ನಿವಾಸಿ ಪುಷ್ಪ (40) ಎಂದು ಗುರುತಿಸಲಾಗಿದೆ. ಇವರು ಮುಂಬೈಯಿಂದ ಆಗಮಿಸಿದ್ದು ಜು. 13 ರ ಸೋಮವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು.
ಸಂಬಂಧಿಕರು ಹುಡುಕಾಡಿದಾಗ ಇವರ ಪಾದರಕ್ಷೆಗಳು ಮನೆಯ ಬಳಿ ಇರುವ ಶಿಬರೂರು ಹೊಳೆಯ ಪಕ್ಕದಲ್ಲಿ ಪತ್ತೆಯಾಗಿದೆ. ಯಾವುದೋ ಕಾರಣಕ್ಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯದಿಂದ ಅಗ್ನಿಶಾಮಕ ದಳದವರು ನದಿಯಲ್ಲಿ ಶೋಧ ಕಾರ್ಯ ನಡೆಸಲು ಮುಂದಾಗಿದ್ದಾರೆ. ಆದರೆ ಮಳೆಯ ಅಬ್ಬರಕ್ಕೆ ನದಿಯಲ್ಲಿ ಪ್ರವಾಹ ಹೆಚ್ಚಿರುವ ಪರಿಣಾಮ ಶೋಧ ನಡೆಸಲು ಅಡ್ಡಿಯಾಗಿದೆ.