ಪುತ್ತೂರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಉದ್ಯೋಗಿ ಮುರಳೀಧರ್ ಪೈ(32) ರವರು ಹೃದಯಾಘಾತದಿಂದಾಗಿ ಜು.12 ರಂದು ರಾತ್ರಿ ನಿಧನರಾದರು.
ಮೂಲತಃ ಕಾಸರಗೋಡು ನಿವಾಸಿಯಾಗಿರುವ ಮುರಳೀಧರ್ ಒಂದೂವರೆ ತಿಂಗಳಿನ ಹಿಂದೆಯಷ್ಟೇ ಪುತ್ತೂರಿಗೆ ವರ್ಗಾವಣೆಯಾಗಿದ್ದು, ನೆಲ್ಲಿಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಮುರಳೀಧರ್ ರವರು ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಪತ್ನಿ ಪೂನಂ ಕೂಡ ಬ್ಯಾಂಕ್ ಉದ್ಯೋಗಿಯಾಗಿದ್ದು, ಕುಂದಾಪುರ ಕೆನರಾ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯಾನಿರ್ವಹಿಸುತ್ತಿದ್ದಾರೆ. ಮುರಳೀಧರ್ ರವರ ಡಿಢೀರ್ ಸಾವು ಪತ್ನಿ ಹಾಗೂ ಕುಟುಂಬಸ್ಥರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.