ಸುಬ್ರಹ್ಮಣ್ಯ: ಇತ್ತಿಚೆಗಷ್ಟೇ ಬೇರೊಬ್ಬನೊಂದಿಗೆ ವಿವಾಹಗೊಂಡಿದ್ದ ಮಾಜಿ ಪ್ರಿಯತಮೆಯ ನಗ್ನ ಹಾಗೂ ಅಶ್ಲೀಲ ಫೋಟೊಗಳನ್ನು ಆಕೆಯ ಪತಿಗೆ ವ್ಯಕ್ತಿಯೊಬ್ಬ ಕಳುಹಿಸುವ ಮೂಲಕ ಎರಡು ತಿಂಗಳ ಹಿಂದೆ ನಡೆದ ವಿವಾಹವೊಂದು ವಿಚ್ಚೇದನ ಹಂತ ತಲುಪಿದೆ. ಈ ವಿಚಿತ್ರ ಘಟನೆಯೂ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಿಂದ ವರದಿಯಾಗಿದೆ.
ಪ್ರಿಯತಮನೊಬ್ಬ ದಾಂಪತ್ಯವನ್ನು ವಿಚ್ಛೇದನ ಹಂತಕ್ಕೆ ತಲುಪಿಸಿರುವ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಕಡಬ ತಾಲೂಕಿನ 26ರ ಹರೆಯದ ಮಹಿಳೆಯೂ ಪ್ರಕರಣ ಸಂತೃಸ್ತೆಯಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ವಿಜೇಶ್ ಎಂಬಾತ ಈ ಮಹಿಳೆಯ ಪೋಟೊವನ್ನು ಆಕೆಯ ಪತಿಗೆ ಕಳುಹಿಸಿ ಸಂಸಾರದಲ್ಲಿ ಹುಳಿ ಹಿಂಡಿದವ. 5 ವರ್ಷಗಳ ಹಿಂದಿನ ಪೋಟೊವನ್ನು ಬಳಸಿ ವಿಜೇಶ್ ಈ ಕೃತ್ಯವನ್ನು ಎಸಗಿರುವುದಾಗಿ ನೊಂದ ಮಹಿಳೆ ಆರೋಪಿಸಿದ್ದಾರೆ.
ಏನಿದು ಪ್ರಕರಣ..? ನೊಂದ ಮಹಿಳೆ ಹಾಗೂ ವಿಜೇಶ್ ಈ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು. 2016 ನವೆಂಬರ್ ತಿಂಗಳ 2 ನೇ ವಾರದ ಒಂದು ದಿನ ಮಹಿಳೆಯೂ ಪುತ್ತೂರಿಗೆ ಕೆಲಸಕ್ಕೆ ತೆರಳಿದ್ದಾಗ ಆಕೆಯನ್ನು ಚಹಾ ಕುಡಿಯಲು ಹೋಟೆಲ್‌ಗೆ ಹೋಗೋಣ ಎಂದು ವಿಜೇಶ್ ಒತ್ತಾಯ ಮಾಡಿದ್ದಾನೆ.
ಬಳಿಕ ವಿಜೇಶನು ತನ್ನ ಆಲ್ಟೋ ಕಾರಿನಲ್ಲಿ ಕೂತ ಮಹಿಳೆಯನ್ನು ಪುತ್ತೂರಿನ ಹೋಟೆಲ್‌ಗೆ ಕರೆದುಕೊಂಡು ಹೋಗದೆ ಬಲವಂತವಾಗಿ ಮಂಗಳೂರಿನ ಸುರತ್ಕಲ್ ಬಳಿಯ ಖಾಸಗಿ ಹೋಟೆಲ್‌ಗೆ ಕರೆದೊಯ್ದಿದ್ದಾನೆ. ನಂತರ ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಮಾಡಿ, ಆಕೆಯ ನಗ್ನ ಸ್ಥಿತಿಯಲ್ಲಿನ ವಿಡಿಯೋ ಮತ್ತು ಫೋಟೋವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮೇ 3, 2021 ರಂದು ಈ ಮಹಿಳೆಯೂ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಇದಾಗಿ ಕೆಲ ದಿನಗಳ ಬಳಿಕ ಆಕೆಯ ಮಾಜಿ ಪ್ರಿಯಕರ ವಿಜೇಶನು ಮಹಿಳೆಯ ಪತಿಗೆ ಈ ಹಿಂದೆ ತೆಗೆದಿದ್ದ ಆಕೆಯ ನಗ್ನ ಫೋಟೋಗಳನ್ನು ಕಳುಹಿಸಿದ್ದಾನೆ.
ಇದರಿಂದ ನವ ವಿವಾಹಿತರ ಸಂಸಾರದಲ್ಲಿ ಬಿರುಕು ಉಂಟಾಗಿತ್ತು ಆಕೆಯ ಪತಿಯೂ ವಿಚ್ಛೇದನಕ್ಕೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇದೀಗ ಮಹಿಳೆಯೂ ವಿಜೇಶನ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಆಕೆಯ ದೂರಿನಂತೆ ಮಹಿಳೆಯ ಅಪಹರಣ, ಅತ್ಯಾಚಾರ ಹಾಗೂ ಮೋಸದ ಕುರಿತಂತೆ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ವಿದೇಶಕ್ಕೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.