ಕಕ್ಕೆಪದವು: ಕ್ರೀಡೆ ಅನ್ನುವುದು ಸದೃಢತೆಯ ಅಯ್ಕೆ.. ಅದರಲ್ಲೂ ಗ್ರಾಮೀಣ ಮಟ್ಟದಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಕ್ರಿಕೆಟ್ ಅಂದರೆ ಸಾಕು ಯುವ ಮನಸುಗಳ ಗಮನ ಇತ್ತ ಹರಿಯುತ್ತದೆ.. ಎಲ್ಲೇ ಕ್ರಿಕೆಟ್ ಇರಲಿ, ಅಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡುವ ಶಕ್ತಿ ಇರುವುದು ಇದೇ ಹಳ್ಳಿಯಿಂದ
ದಿಲ್ಲಿಯವರೆಗೂ ಪ್ರಸಿದ್ಧಿ ಪಡೆದಿರುವ ಕ್ರೀಡೆ ಕ್ರಿಕೆಟ್ ಗೆ… ಕೊರೋನಾ ಬೆನ್ನಲ್ಲೇ ಕ್ರಿಕೆಟ್ ಹವಾ ಕೂಡಾ ಎಲ್ಲೆಡೆ ಕಂಡು ಬರುತ್ತಿದೆ.. ಗಲ್ಲಿ ಗಲ್ಲಿಗಳ ಯುವ ಸಮೂಹಗಳು ಕ್ರಿಕೆಟ್ ಪಂದ್ಯದಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಕ್ರಿಕೆಟ್ ಪ್ರಿಯರ ಪಾಲಿಗೆ ಡಾ. ಬಿ. ಆರ್. ಅಂಬೇಡ್ಕರ್ ಯುವಕ ಸಂಘ(ರಿ) ಕಕ್ಕೆಪದವು ಇದೇ ಬರುವ ಜ. 3ರಂದು ಕಕ್ಕೆಪದವು ಹೈಸ್ಕೂಲ್ ಮೈದಾನದಲ್ಲಿ ಅರ್ಪಿಸುತ್ತಿದೆ ಆಹ್ವಾನಿತ 16 ತಂಡಗಳ ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ…ಜಿಲ್ಲೆಯ ಪ್ರತಿಷ್ಠಿತ ಆಹ್ವಾನಿತ 16 ತಂಡಗಳ ಜಿದ್ದಾಜಿದ್ದಿನ ಹಣಾಹಣಿಯೊಡನೆ, ಅದೃಷ್ಟ ನಾಯಕನ ಆಯ್ಕೆ ಹಾಗೂ ಕ್ರೀಡಾ ಕಿಟ್ ವಿತರಣೆಯೊಡನೆ, ಆಗಮಿಸುವ ಕ್ರೀಡಾಭಿಮಾನಿಗಳಿಗೂ ವಿಶೇಷ ಬಹುಮಾನದೊಡನೆ, ಭಾಗವಹಿಸುವ 16 ತಂಡಗಳಿಗೂ ವಿಶೇಷವಾಗಿ ಗೌರವಿಸುವ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿ, ಗಣ್ಯಾತಿ ಗಣ್ಯರ ಉಪಸ್ಥಿತಿಯೊಡನೆ, ಅಮೋಘ ನಗದು ಬಹುಮಾನ, ಅಂಬೇಡ್ಕರ್ ಟ್ರೋಫಿ, ವೈಯಕ್ತಿಕ ಪ್ರಶಸ್ತಿಯ ಗರಿಯ ಜೊತೆಗೆ ಶೈಕ್ಷಣಿಕ – ಕ್ರೀಡಾ – ಆರೋಗ್ಯ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ..
ರೋಚಕ ಪಂದ್ಯಾವಳಿಯ ಸಂಪೂರ್ಣ ಝಲಕ್ ಅಭಿಮತ TV ಮೂಲಕ ನೇರಪ್ರಸಾರಗೊಳ್ಳಲಿರುವುದು…