ಪುತ್ತೂರು : ವಿಭಿನ್ನ ಮಾದರಿಯ, ಬಣ್ಣ ಬಣ್ಣದ, ಅತ್ಯಾಕರ್ಷಕ ಮಾದರಿಯ ಮಹಿಳೆಯರ ಉಡುಪುಗಳ ಮಳಿಗೆ ಶೈಮಾ ಕಲೆಕ್ಷನ್ ಡಿ. 11ರಂದು ಪುತ್ತೂರಿನ ಎಂ. ಟಿ. ರಸ್ತೆಯಲ್ಲಿನ ಎ. ಎಚ್. ಹಿಂದೂಸ್ತಾನ್ ಸಿಟಿ ಮಾರ್ಕೆಟ್ ನಲ್ಲಿ ಶುಭಾರಂಭಗೊಳ್ಳಲಿದೆ.
ಕೇಂದ್ರ ಜುಮ್ಮಾ ಮಸೀದಿಯ ಖತೀಬ್ ಅಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾದೊಂದಿಗೆ ಮಳಿಗೆ ಉದ್ಘಾಟಿಸಲಿದ್ದಾರೆ.ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಎಸ್ ಡಿ ಪಿ ಐ ಅಧ್ಯಕ್ಷ ಕೆ. ಎ. ಸಿದ್ಧಿಕ್, ಟೋಪ್ಕೋ ಝಂ ಝಂ ಜ್ಯುವೆಲ್ಲರ್ಸ್ ಮಾಲಕ ಟಿ. ಕೆ. ಮುಹಮ್ಮದ್, ಕೂರ್ನಡ್ಕ ಫೀರ್ ಮೊಹಲ್ಲಾ ಮಸೀದಿ ಅಧ್ಯಕ್ಷ ಕೆ. ಎಚ್. ಖಾಸಿಂ, ಬುಳೇರಿಕಟ್ಟೆ ಮಂಜ ಅನ್ಸಾರಿಯಾ ಜುಮಾ ಮಸೀದಿ ಖತೀಬ್ ಸುಲೈಮಾನ್ ದಾರಿಮಿ, ಬುಳೇರಿಕಟ್ಟೆ ಮಂಜ ಅನ್ಸಾರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಕೀಂ ಬಿ, ಮುಕ್ವೆ ಟಿಂಬರ್ ಮರ್ಚಂಟ್ ಮೊಹಮ್ಮದ್ ಹನೀಫ್, ಕೆ. ಖಾದರ್ ಕೂರ್ನಡ್ಕ, ಸುಳ್ಯದ ಉದ್ಯಮಿ ಹಸನ್, ಯೂಸುಫ್ ಕೂರ್ನಡ್ಕ, ಇಸ್ಮಾಯಿಲ್ ಕೂರ್ನಡ್ಕ, ಟಿ. ಎಚ್. ಹಮೀದ್ ಪುರುಷರಕಟ್ಟೆ, ಬುಳೇರಿಕಟ್ಟೆಯ ಉದ್ಯಮಿ ಮೊಹಮ್ಮದ್ ಇಸಾಕ್, ಬಂಟ್ವಾಳ ನಗರ ಸಭಾ ಸದಸ್ಯ ಇದ್ರಿಸ್ ಭಾಗವಹಿಸಲಿದ್ದಾರೆ.ನೂತನ ಮಳಿಗೆಯಲ್ಲಿ ಮಹಿಳೆಯರ ಆಕರ್ಷಕ ಉಡುಪುಗಳು, ಉತ್ಕೃಷ್ಟ ಗುಣಮಟ್ಟದ ಸೀರೆಗಳು, ಚೂಡಿದಾರ್ ಗಳು, ರೆಡಿಮೇಡ್ ಸಲ್ವಾರ್, ಟಾಪ್ಸ್, ಲೆಗಿನ್ಸ್, ಗೌನ್ಸ್ ಮಿತದರದಲ್ಲಿ ಲಭ್ಯವಿದೆ ಎಂದು ಮಳಿಗೆಯ ಮಾಲಕ ಬಶೀರ್ ಕೂರ್ನಡ್ಕ ತಿಳಿಸಿದ್ದಾರೆ