ಕಡಬ: ಪೆರಾಬೆ ಗ್ರಾಮದ ಮಾರ್ ಇವಾನಿಯೋಸ್ ಮಹಿಳಾ ಬಿಎಡ್ ಕಾಲೇಜಿನ ಕಟ್ಟಡದ ಹಿಂಬದಿಯಲ್ಲಿ ಮುಖಕ್ಕೆ ಬಟ್ಟೆ ಕಟ್ಟಿ ಕೊಂಡು ಅಡಗಿ ಕುಳಿತಿದ್ದ ವ್ಯಕ್ತಿಯೋರ್ವರರನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ಗಸ್ತುತಿರುಗುತ್ತಿದ್ದ ಕಡಬ ಠಾಣೆಯ ಎ.ಎಸ್.ಐ.ಸುರೇಶ್ ಸಿಟಿ ಯವರು ಜು.17ರ ಬೆಳಗಿನ ಜಾವ ಅಡಗಿ ಕುಳಿತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಮಂಗಳೂರಿನ ಮರವೂರು ನಿವಾಸಿ ಶರತ್ (34) ಎಂದು ಗುರುತಿಸಲಾಗಿದೆ.
ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಮಹಿಳಾ ಬಿಎಡ್ ಕಾಲೇಜಿನ ಎದುರುಗಡೆಯಿಂದ ಕಟ್ಟಡದ ಹಿಂಬದಿಗೆ ವ್ಯಕ್ತಿಯೊಬ್ಬ ಓಡಿ ಹೋಗುವುದನ್ನು ನೋಡಿದ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈತನ ವಿರುದ್ದ ಕಡಬ ಠಾಣೆಯಲ್ಲಿ ಸಣ್ಣ ಪ್ರಕರಣ ಸಂಖ್ಯೆ 148/2021 ಕಲಂ: 96 ಕೆ.ಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.