ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನಲ್ಲಿ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಬಸ್ಸಿನ ಚಾಲಕ ಲೋ ಬಿಪಿಯಿಂದಾಗಿ ಸ್ಟೇರಿಂಗ್‌ನ ಮೇಲೆ ಕುಸಿದು ಬಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಸೇಫ್ ವೇ ಟ್ರಾವೆಲ್ಸ್ ಎಂಬ ಖಾಸಗಿ ಬಸ್ ಪುತ್ತೂರಿನಿಂದ ಮಂಗಳೂರಿಗೆ ಚಲಿಸುತ್ತಿದ್ದಾಗ ಅಡ್ಯಾರ್‌ಗೆ ತಲುಪುತ್ತಿದ್ದಂತೆ ಚಾಲಕನಿಗೆ ಕಣ್ಣು ಮಂಜಾಗುತ್ತಿದ್ದಂತೆ ಬಸ್ ಅನ್ನು ಹೆದ್ದಾರಿಯ ಪಕ್ಕದ ಸಹ್ಯಾದ್ರಿ ಕಾಲೇಜಿನ ಗೇಟ್ ಮುಂದೆ ತಕ್ಷಣ ನಿಲ್ಲಿಸಿದ್ದಾರೆ.
ಬಸ್‌ನಲ್ಲಿ ಜನರು ತುಂಬಿದ್ದು, ಚಾಲಕನ ನಿಯಂತ್ರಣ ಸ್ಪಲ್ಪ ತಪ್ಪುತ್ತಿದ್ದರೂ ಪ್ರಾಣಾಪಾಯ ಸಂಭಂವಿಸುತ್ತಿತ್ತು. ಬಸ್ ನಿಲ್ಲಿಸಿದ ನಂತರ ಚಾಲಕ ಕೆಳಗೆ ಬೀಳುತ್ತಿದ್ದಂತೆ ಸ್ಟೇರಿಂಗ್‌ನ ಎಡೆಯಿಂದ ಚಾಲಕನನ್ನು ಎಳೆದಿದ್ದಾರೆ.
ಇನ್ನು ಬಸ್ ಚಾಲಕನನ್ನು ಪುತ್ತೂರು ಮೂಲದ ಸಂತೋಷ್ ಎಂದು ಗುರುತಿಸಲಾಗಿದೆ.
ಚಾಲಕ ಸಂತೋಷ್ ಒಂದು ವರ್ಷದಿಂದ ಅದೇ ಬಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ್ ಅವರ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿ ಹೋಗಿದೆ ಎಂದು ಬಸ್‌ನ ಕಂಡಕ್ಟರ್ ಶೇಖರ್ ಹೇಳಿದ್ದಾರೆ.