ಪುತ್ತೂರು : ಜಿಡೆಕಲ್ಲಿನ ಗಡೆಕಲ್ಲು ನಿವಾಸಿಯೊಬ್ಬರ ಮನೆಗೆ ವಿದ್ಯುತ್ ಸಂಪರ್ಕವೇ ಇಲ್ಲದ್ದನ್ನು ಮನಗಂಡು ಬೆಳಕು ನೀಡುವ ಕಾರ್ಯ ನಡೆದಿದೆ.
ಪುತ್ತೂರು ತಾಲೂಕಿನ ಜಿಡೆಕಲ್ಲಿನ ಗಡೆಕಲ್ಲು ನಿವಾಸಿಯಾಗಿರುವ ರೇಖಾ ಅವರ ಮನೆಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ.. ಇವರು ಕತ್ತಲಿನಲ್ಲೇ ಜೀವನ ದೂಡಬೇಕಾಗಿತ್ತು ಅಥವಾ ಯಾವುದೋ ಬ್ಯಾಟರಿ ಮೂಲವನ್ನು ಅನುಸರಿಸಬೇಕಾಗಿತ್ತು. ಇದೀಗ ಈ ಮನೆಯ ಸಮಸ್ಯೆಯನ್ನು ಅರಿತ ಪುತ್ತೂರಿನ ಪ್ರತಿಷ್ಠಿತ ಪದ್ಮಶ್ರೀ ಸೋಲಾರ್ ನ ಮಾಲಕ, ಸಾಮಾಜಿಕವಾಗಿ ಹಲವು ಸೇವೆಗಳನ್ನು ಸಲ್ಲಿಸುತ್ತಾ ನೊಂದವರಿಗೆ ಬೆಳಕಾಗುವ, ಧಾರ್ಮಿಕ ಕಾರ್ಯಗಳಲ್ಲಿ ಅತೀವ ಶ್ರದ್ಧೆಯಿಂದ ತೊಡಗಿಸಿಕೊಳ್ಳುವ ಸೀತಾರಾಂ ರೈ ಕೆದಂಬಾಡಿಗುತ್ತು ಸೋಲಾರ್ ವಿದ್ಯುತ್ ನೀಡಿ ಈ ಮನೆಗೆ ಬೆಳಕಾಗಿದ್ದಾರೆ.
ಇವತ್ತಿನ ದಿನದಲ್ಲಿ ಖರ್ಚುಗಳೆಲ್ಲಾಗುತ್ತದೋ ಎಂದು ಚಿಂತಿಸುವವರ ಮಧ್ಯೆ ಕತ್ತಲೇ ತುಂಬಿದ ಬಾಳಿಗೆ ಸಹಕರಿಸುವುದೆಂದರೆ ನಿಸ್ವಾರ್ಥತೆಯ ಪ್ರತಿರೂಪ.. ಇಂತಹ ಕಾರ್ಯ ಸೀತಾರಾಂ ಅವರಿಂದ ನಡೆದಿದ್ದು ಇದರಿಂದಾಗಿ ರೇಖಾ ಅವರ ಮನೆ ಬೆಳಕನ್ನು ಕಾಣುವಂತಾಗಿದೆ. ಈ ಸಂದರ್ಭದಲ್ಲಿ ಟೌನ್ ಬ್ಯಾಂಕ್ ನಿರ್ದೇಶಕ ಸದಾಶಿವ ಪೈ ಕೂಡಾ ಸಹಕಾರವನ್ನು ನೀಡಿದರು. ಈ ಸಂದರ್ಭದಲ್ಲಿ ಪದ್ಮ ಸೋಲಾರ್ ಸಿಬ್ಬಂದಿಗಳು ಉಪಸ್ಥಿತರಿದ್ದರು.