ಉಡುಪಿ : ಮೂರು ತಿಂಗಳ ಹಿಂದೆ ಉಡುಪಿಯಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಇನ್ನೂ ಪತ್ತೆಯಾಗದ ಹಿನ್ನಲೆ ಇದೀಗ ಮಣಿಪಾಲ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ. ಮಣಿಪಾಲ ಪೆರಂಪಳ್ಳಿಯ ನಿವಾಸಿ ಆಶಾ ಡಿಸೋಜ ಎಂಬವರ ಪುತ್ರಿ ಅವೀನಾ (16) ಎಂಬಾಕೆ ನಾಪತ್ತೆಯಾಗಿರುವ ಬಾಲಕಿ.
ಬಾಲಕಿ ಅವೀನಾ ಎಪ್ರಿಲ್ 13ರಂದು ಪೆರಂಪಳ್ಳಿಯ ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ಈವರೆಗೂ ಬಾಲಕಿಯ ಸುಳಿವು ಸಿಕ್ಕಿಲ್ಲ. ಹೀಗಾಗಿ ಪೊಲೀಸರು ಲುಕೌಟ್ ನೋಟಿಸ್ ಹೊರಡಿಸಿದ್ದಾರೆ.
.
ಒಂಬತ್ತನೆ ತರಗತಿ ಓದುತ್ತಿದ್ದ ಈಕೆ ಕನ್ನಡ ಭಾಷೆ ಬಲ್ಲವಳಾಗಿದ್ದಾಳೆ. ಬಾಲಕಿ ಬಗ್ಗೆ ಸುಳಿವು ಇದ್ದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮಣಿಪಾಲ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಚಹರೆ: 4.5 ಮೀಟರ್ ಎತ್ತರವಿದ್ದು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆ ಮೊ.ನಂ: 9480805448, 9480805475 ಅಥವಾ ಕಂಟ್ರೋಲ್ ರೂಂ ನಂ: 0820-2570328 ಅನ್ನು ಸಂಪರ್ಕಿಸುವಂತೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.