ಬಂಟ್ವಾಳ: ಮನೆಯೊಂದರಲ್ಲಿ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಅಂದರ್ ಬಾಹರ್ ಆಟವನ್ನು ಆಡುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಜು.25 ರಂದು ಬಂಟ್ವಾಳ ತಾಲೂಕು ನಾವೂರು ಗ್ರಾಮದ ಬಡಗುಂಡಿಯಲ್ಲಿ ವರದಿಯಾಗಿದೆ.
ನಾವೂರು ಗ್ರಾಮದ ಬಡಗುಂಡಿ ಮನೆಯೊಂದರಲ್ಲಿ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಅಂದರ್ ಬಾಹರ್ ಆಡುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಬಂದ ಮಾಹಿತಿಯ ಮೇರೆಗೆ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ದಕ್ಷಿಣಕನ್ನಡ ಮಹಿಳಾ ಪೊಲೀಸ್ ಠಾಣೆ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್ ರವರು ಬಂಟ್ವಾಳ ಉಪವಿಭಾಗ ಪೊಲೀಸ್ ಉಪಾಧೀಕ್ಷಕರಿಂದ ಸರ್ಚ್ ವಾರಂಟ್ ಪಡೆದು ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಅಂದರ್ ಬಾಹರ್ ಆಡುತ್ತಿದ್ದ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ, ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಆಟ ಆಡುತ್ತಿದ್ದು 12 ಜನರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನುಕೃಷ್ಣ ಪೂಜಾರಿ,ರೋಹಿತಾಶ್ವ, ಗೋಪಾಲ,ಸತೀಶ ಮೂಲ್ಯ, ವಿಜಯ ಫೆರ್ನಾಂಡಿಸ್,ವಿಶ್ವಾಸ್ ಭಂಡಾರಿ,ಗಂಗಾಧರ ಪೂಜಾರಿ, ಕೃಷ್ಣಪ್ಪ, ಶಿವಪ್ರಸಾದ್, ಮೊಹಮ್ಮದ್ ಶರೀಫ್, ಮೊಹಮ್ಮದ್ ಅಶ್ರಫ್, ರಿಯಾಝ್ ಎಂದು ಗುರುತಿಸಲಾಗಿದೆ.
ಆಟಕ್ಕೆ ಬಳಸಿದ ನಗದು ರೂ 45,000/-, 12 ಮೊಬೈಲ್ ಫೋನ್ ಗಳು ಅಂದಾಜು 40,000/, 4 ಬೈಕ್ ಗಳು ಅಂದಾಜು ಮೌಲ್ಯ 1,20,000/-, 1 ಓಮ್ನಿ ವಾಹನ ಅಂದಾಜು ಮೌಲ್ಯ 50,000/-, 1 ಆಟೋರಿಕ್ಷಾ ಅಂದಾಜು ಮೌಲ್ಯ 40,000/- ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣಾಯಲ್ಲಿ ಅ.ಕ್ರ 83/2021 ಕಲಂ 78, 80 ಕರ್ನಾಟಕ ಪೊಲೀಸ್ ಕಾಯ್ದೆ 1963 ರಂತೆ ಪ್ರಕರಣ ದಾಖಲಾಗಿದೆ.