ಪುತ್ತೂರು: ಶ್ರೀ ವಿಷ್ಣುಯುವ ಶಕ್ತಿ ಬಳಗ(ರಿ) ಮಜ್ಜಾರಡ್ಕ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆದಂಬಾಡಿ(ರಿ) ವಲಯ, ಶಾಲಾ ಅಭಿವೃದ್ಧಿ ಸಮಿತಿ ತೆಗ್ಗು, ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ ತೆಗ್ಗು ಇದರ ಜಂಟಿ ಆಶ್ರಯದಲ್ಲಿ “ಸ್ವಚ್ಚ ಭಾರತ್” ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಆಧ್ಯ ಆರ್. ಜೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆದಂಬಾಡಿ ಒಕ್ಕೂಟ ಇದರ ಅಧ್ಯಕ್ಷರಾದ ಶ್ರೀಧರ ಪೂಜಾರಿ, ರೇಖಾ ರೈ, ಸೇವಾ ಪ್ರತಿನಿಧಿ ಕಿರಣ್ ರಾಜ್, ಶಾಲಾ ಮುಖ್ಯಗುರುಗಳು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಸತತ ನಾಲ್ಕನೇ ವಾರಕ್ಕೆ ಕಾಲಿಟ್ಟ ಶ್ರೀ ವಿಷ್ಣು ಯುವಶಕ್ತಿ ಬಳಗದ ಸ್ವಚ್ಚ ಭಾರತ್ ಕಾರ್ಯಕ್ರಮವನ್ನು ಹಾಗೂ ಸಂಘಟನೆಯನ್ನು ತೆಗ್ಗು ಶಾಲಾ ಸಮಿತಿ ಹಾಗೂ ಊರವರು ಪ್ರಶಂಸಿಸಿದರು.
ಸಮಾರೋಪ ಸಮಾರಂಭದಲ್ಲಿ ಶ್ರೀವಿಷ್ಣು ಯುವ ಶಕ್ತಿ ಬಳಗದ ಅಧ್ಯಕ್ಷ ರವಿ ಮಜ್ಜಾರ್,ಸಂಘಟನೆ ಸಂಘಟಕರಾದ ರಾಜೇಶ್ ಕೆ ಮಯೂರ, ಕೋಶಾಧಿಕಾರಿ ಗುರುಪ್ರಸಾದ್ ಮಜ್ಜಾರ್, ರವಿ ಅಜಿಲ, ಶ್ರೇಯಸ್ ರೈ ಗೋಳ್ತಿಲ, ಅನಿಲ್ ಮಣಿಯಾಣಿ ಗೋಳ್ತಿಲ,ಹರೀಶ್ ಮಡಿವಾಳ ಕೋಡಿಯಡ್ಕ, ಪ್ರತೀಕ್ ಮಣಿಯಾಣಿ ಗೋಳ್ತಿಲ, ಮಣಿ ಗೋಳ್ತಿಲ,ಹೇಮಾಚಂದ್ರ ಕೋಡಿಯಡ್ಕ, ದೀಪಕ್ ಕೋಡಿಯಡ್ಕ, ಹೃತಿಕ್, ಹರೀಶ್,ಲೋಕೇಶ್,ಸಾಂತಪ್ಪ ಓಲ್ತಾಜೆ,ಸತೀಶ್ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.