ವಿಟ್ಲ: ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ವತಿಯಿಂದ ಲಯನ್ಸ್ ಕ್ಲಬ್ ಸದಸ್ಯ ಹಾಗೂ ಮಾಜಿ ಯೋಧ ಹರೀಶ್ ಶೆಟ್ಟಿ ಯವರನ್ನು ಶಾಲು ಹೊದಿಸಿ ಹೂ ಗುಚ್ಚ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಸತೀಶ್ ಕುಮಾರ್ ಆಳ್ವ,ಪ್ರಾಂತೀಯ ಸಲಹೆಗಾರ ಸುದರ್ಶನ್ ಪಡಿಯಾರ್, ಸದಸ್ಯ ಹಾಗೂ ಇಂಜಿನಿಯರ್ ಭಾಸ್ಕರ ರೈ ಹಾಗೂ ವಿಟ್ಲ ಸಿಟಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಬಿ. ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.