ಪುತ್ತೂರು: ಕರ್ನಾಟಕ ಸರಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ಹಾಗೂ ಶ್ರೀವಿಷ್ಣು ಯುವ ಶಕ್ತಿ ಬಳಗ(ರಿ) ಮಜ್ಜಾರಡ್ಕ ವತಿಯಿಂದ “ನಾಯಕತ್ವ ತರಬೇತಿ ಕಾರ್ಯಗಾರ” ಹಾಗೂ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಜು.25 ರಂದು ಮಜ್ಜಾರಡ್ಕದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷ ರವಿ ಮಜ್ಜಾರ್ ವಹಿಸಿದ್ದರು.ಯುವ ಸ್ಪಂದನ ಕೇಂದ್ರ ಮಂಗಳೂರು ಇದರ ಯುವ ಪ್ರವರ್ತಕರಾದ ಶ್ರೀಕಾಂತ್ ಪೂಜಾರಿ ಬೀರಾವು ಇವರು ಯುವ ಸಬಲೀಕರಣದ ಬಗ್ಗೆ ಹಾಗೂ ಸಂಘಟನೆಯ ಮಹತ್ವ ಹಾಗೂ ಕಾರ್ಯಕರ್ತರು ಜೀವನದಲ್ಲಿ ರೂಢಿಸಿಕೊಳ್ಳಬೇಕಾಗಿರುವ ವಿಷಯದ ಬಗ್ಗೆ ಪ್ರಸ್ತಾವಿಕವಾಗಿ ಮಾಹಿತಿ ನೀಡಿದರು.
ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್ ಮಾತನಾಡಿ, ಸಂಘಟನೆಯ ಬಲವರ್ಧನೆ ಹಾಗೂ ಯಾವ ಯಾವ ಕಾರ್ಯಕ್ರಮಗಳನ್ನು ನೀಡಬಹುದು ಎಂದು ಸಂಘಟನೆಗೆ ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಮಕೃಷ್ಣ ಪಡುಮಲೆ ಮಾತಾನಾಡಿ, ಯುವ ಸಂಘಟನೆಯ ಕಾರ್ಯ ವೈಖರಿಯನ್ನು ನಾನು ಈಗಾಗಲೇ ನ್ಯೂಸ್ ಪೇಪರ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿಸುತ್ತಾ ಬಂದಿದ್ದೇನೆ. ತಾಲೂಕಿನಲ್ಲಿ ಉತ್ತಮ ಸಂಘಟನೆಯಾಗಿ ಗುರುತಿಸಿಕೊಂಡು ಬಂದಿದ್ದು ತುಂಬಾ ಸಂತೋಷವಾಗಿದೆ ಎಂದರು.
ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವೂ ಈ ಸಂದರ್ಭದಲ್ಲಿ ನಡೆಯಿತು. ಸುಮಾರು 20 ಮಕ್ಕಳು ಪಾಲ್ಗೊಂಡಿದ್ದರು. ಪುತ್ತೂರು ಪೊಲೀಸ್ ಇಲಾಖೆಯ ರಾಧಾಕೃಷ್ಣ ಗೌಡ ಪೆರ್ನೆ,ರಾಜೇಶ್ ಮಯೂರ, ರವಿ ಮಜ್ಜಾರ್ ಇವರುಗಳು ಪುಸ್ತಕವನ್ನು ಉಚಿತವಾಗಿ ಸಂಘಟನೆಗೆ ನೀಡಿದರು.
ಪ್ರಾರ್ಥನೆಯನ್ನು ಹರೀಶ್ ಸ್ವಾಮಿನಗರ ನೆರವೇರಿಸಿದರೇ, ಸ್ವಾಗತ ಮತ್ತು ಧನ್ಯವಾದ ,ನಿರೂಪಣೆಯನ್ನು ಸಂಘಟನಾ ಕಾರ್ಯದರ್ಶಿ ರಾಜೇಶ್ ಮಯೂರ ನೆರವೇರಿಸಿದರು. ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.