ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ತಿಂಗಳಾಡಿ ಚಂದ್ರ ಶೇಖರ್ ಪೂಜಾರಿ ಇವರ ಏಕೈಕ ಪುತ್ರನಾಗಿರುವ ಯತೀಶ್ ಸಾಲಿಯಾನ್ ಇನ್ನಾ ಪಡುಬಿದ್ರಿ ಇವರು ಕಳೆದ ಒಂದು ತಿಂಗಳ ಹಿಂದೆ ಪಡುಬಿದ್ರೆಯಲ್ಲಿ ನಡೆದಂತಹ ರಸ್ತೆ ಅಪಘಾತದಲ್ಲಿ ಸಿಲುಕಿ, ತಲೆಗೆ ತೀವ್ರ ಗಾಯಗಳಾಗಿವೆ ಇಂದಿಗೂ ಕೋಮಾವಸ್ಥೆಯಲ್ಲಿದ್ದಾರೆ..
ಆ ದುರ್ಘಟನೆ ಇವರ ಬಾಳನ್ನೇ ದುರಂತದ ಕೂಪಕ್ಕೆ ತಳ್ಳಿದಂತಿದೆ. ಇದರ ಪರಿಣಾಮ ಇಂದಿಗೂ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನಡೆಯುತ್ತಿದ್ದು, ಮನೆಯ ಪರಿಸ್ಥಿತಿ ಕೂಡಾತೀರಾ ಹಿಂದುಳಿದ ಸ್ಥಿತಿಯಲ್ಲಿದ್ದು, ಈ ಮನೆಯ ಪರಿಸ್ಥಿತಿಯನ್ನು ಗಮನಿಸಿ ಬಡಕುಟುಂಬದ ಮನವಿಗೆ ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಜೈ ಹನುಮಾನ್ ಶಾಖೆ, ಅಜಿಲಮೊಗರು ಹಾಗೂ ವೀರಾಂಜನೇಯ ಶಾಖೆ ಮಾವಿನಕಟ್ಟೆ ಮತ್ತು ಊರಿನ ಸ್ಥಳೀಯ ದಾನಿಗಳು 25000 ಮೊತ್ತವನ್ನು ಸಹಾಯಧನವಾಗಿ ನೀಡಿದರು.. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಅಜಿಲಮೊಗರು ಇದರ ಅಧ್ಯಕ್ಷರಾದ ಪ್ರಕಾಶ್ ಅಂಚನ್ ಮೇಗಿನ ಮನೆ , ಗೌರವಾಧ್ಯಕ್ಷರಾದ ನಾಗರಾಜ್ ಕುಟ್ಟಿಕಳ, ಭಜರಂಗದಳದ ಸಂಚಾಲಕರಾದ ಶಿವಾನಂದ ಕುಲಾಲ್ ನೇಲ್ಯಪಲ್ಕೆ, ವಿಶ್ವ ಹಿಂದೂ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ನೇಲ್ಯಪಲ್ಕೆ, ಹಾಗೂ ಸದಸ್ಯರಾದ ರವಿರಾಜ್ ಕುಟ್ಟಿಕಳ, ಸುಜಿತ್ ಕುಮಾರ್ ಕಡಮಜೆ, ದೀಕ್ಷಿತ್ ನೇಲ್ಯಪಲ್ಕೆ ಮತ್ತಿತರರು ಉಪಸ್ಥಿತರಿದ್ದರು..