ಕಡಬ: ಸೇವಾಭಾರತಿ ಇದರ ಸೇವಾಧಾಮದ ವತಿಯಿಂದ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆಶಾಕಾರ್ಯಕರ್ತರಿಗೆ ಬೆನ್ನುಹುರಿ ಅಪಘಾತ ಮತ್ತು ಒತ್ತಡದ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು.
ಬೆನ್ನುಹುರಿ ಅಪಘಾತ ಮತ್ತು ಒತ್ತಡದ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಗಾರ ಹಾಗೂ ಅದರ ಪರಿಣಾಮದ ಬಗ್ಗೆ ವಿವರವಾಗಿ ಮಾಹಿತಿ ನೀಡಿ ಬೆನ್ನುಹುರಿ ಅಪಘಾತ ದಿಂದ ಉಂಟಾಗುವ ಸಮಸ್ಯೆ ಹಾಗೂ ಅದನ್ನು ಎದುರಿಸುವ ರೀತಿ ಮತ್ತು ದೈನಂದಿನ ಜೀವನದಲ್ಲಿ ಆಗುವ ಬದಲಾವಣೆ ಮತ್ತು ವ್ಯತ್ಯಾಸಗಳ ಬಗ್ಗೆ ಸೇವಾಭಾರತಿಯ ಸಿಬ್ಬಂದಿಯಾದ ಅಖಿಲೇಶ್. ಎ ಇವರು ವಿವರವಾಗಿ ತಿಳಿಸುತ್ತಾ ಪರಿಣಾಮವನ್ನು ತಡೆಗಟ್ಟುವ ರೀತಿ ಮತ್ತು ಆಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುಚಿತ್ರ, ಕಡಬ ಪ್ರಾಥಮಿಕ ಕೇಂದ್ರದ ದಾದಿಯರು ಮತ್ತು ಸೇವಾಭಾರತಿಯ ಸಿಬ್ಬಂದಿಯಾದ ಮನು. ಆರ್ ಹಾಗೂ ಆಶಾಕಾರ್ಯಕರ್ತರು ಉಪಸ್ಥಿತರಿದ್ದರು.