ಪುತ್ತೂರು: ಕಂದಾಯ ಇಲಾಖೆ ವತಿಯಿಂದ ಒಳಮೊಗರು ಗ್ರಾಮದ ದರ್ಬೆತಡ್ಕ ಎಂಬಲ್ಲಿ ದಲಿತ ಕುಟುಂಬದವರ ಮನೆಯನ್ನು ಅಮಾನವೀಯವಾಗಿ ತೆರವುಗೊಳಿಸಿರುವ ಪ್ರಕರಣದ ಬಗ್ಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಯೋಗ ಎ ಸಿ ಯವರನ್ನು ಭೇಟಿ ಯಾಗಿ ಈ ಪ್ರಕರಣದಲ್ಲಿ ನಡೆದ ಅನ್ಯಾಯದ ಬಗ್ಗೆ ಅವರ ಗಮನಕ್ಕೆ ತಂದರು, ಇದರಿಂದ ಸದರಿ ಕುಟುಂಬ ಬೀದಿ ಪಾಲಾಗಿದೆ, ಇವರಿಗೆ ನ್ಯಾಯ ಒದಗಿಸಿಕೊಡಬೇಕು.ಈ ಪ್ರಕರಣದಲ್ಲಿ ಕೆಲಮಟ್ಟದ ಸಿಬ್ಬಂದಿಗಳು ಇಲಾಖಾ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ, ಮನೆ ತೆರವುಗೊಳಿಸಿ ದೌರ್ಜನ್ಯ ಎಸಗಿರುತ್ತಾರೆ, ಕರ್ತವ್ಯಲೋಪ ಎಸಗಿರುವ ಸಂಬಂಧ ಪಟ್ಟ ಗ್ರಾಮಕರಣಿಕ ಹಾಗೂ ಕಂದಾಯ ನಿರೀಕ್ಷರ ವಿರುದ್ಧ ಕ್ರಮಕೈಗೊಂಡು, ಸಂತ್ರಸ್ತರಿಗೆ ಸೂರು ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ನಗರ ಸಭೆಯವರು ಬಡ ಬೀದಿ ವ್ಯಾಪಾರಿಗಳ ಗೂಡಂಗಡಿ ತೆರವು ಗೊಳಿಸಿರುತ್ತಾರೆ. ಈ ರೀತಿ ಬಡ ವ್ಯಾಪಾರಸ್ಥರ ಬದುಕು ನಾಶಪಡಿಸುವ ಕೃತ್ಯ ಎಸಗಳಾಗಿರುತ್ತದೆ.ಇಂತಹ ಪ್ರಕರಣಗಳಲ್ಲಿ ಬಿಜೆಪಿ ಆಡಳಿತದ ಮಾತು ಕೇಳಿ ಬಡವರಿಗೆ ಅನ್ಯಾಯ ಮಾಡದಂತೆ ಮತ್ತು ಬಡವರಿಗೊಂದು, ಶ್ರೀಮಂತರಿಗೊಂದು ಕಾನೂನು ಮಾಡದಂತೆ ಪೌರಾಯುಕ್ತರಿಗೆ ಸೂಚನೆ ನೀಡಲು ಕಾಂಗ್ರೆಸ್ ಮನವಿ ಮಾಡಿತು.
ನಿಯೋಗದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ,ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ, ಕಾರ್ಮಿಕ ಘಟಕದ ಅಧ್ಯಕ್ಷ ಶರೋನ್ ಸಿಕ್ವೆರಾ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಯಾಕೂಬ್ ದರ್ಬೆ, ಯಂಗ್ ಬ್ರಿಗೇಡ್ ನ ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂತೋಷ ಭಂಡಾರಿ ಚಿಲ್ಮೆತ್ತಾರ್, ಒಳಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ, ಪಾಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಬುರೈ ಕೋಟೆ, ಕಾಂಗ್ರೆಸ್ ಕಾರ್ಯಕರ್ತರಾದ ರಫೀಕ್ ಅರಿಯಡ್ಕ, ರವಿ ಎನ್ ಕಟಿಲ್ಟಡ್ಕ, ಆದಂ ಕಲ್ಲರ್ಪೆ ಉಪಸ್ಥಿತರಿದ್ದರು.