ಪುತ್ತೂರು: ಸ್ವೀಟ್ ಅಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರಿಬಿಡುತ್ತದೆ. ಆ ಸ್ವಾದವೇನು, ಆ ನೂತನತೆಯೇನು, ಒಟ್ಟಿನಲ್ಲಿ ಜೀವನದಾದಿಗಳಿಂದ ಹಿಡಿದು ಹಬ್ಬ ಹರಿದಿನ ಸಂಭ್ರಮಾಚರಣೆಗಳು ಈ ಸ್ವೀಟ್ಸ್ ಇಲ್ಲದೆ ಅಪೂರ್ಣ ಅನ್ನುವಂತಹ ಭಾವ ನಮ್ಮೆಲ್ಲರಲ್ಲೂ ಮನೆಮಾಡಿಬಿಟ್ಟಿದೆ. ಹಿಂದೆಲ್ಲಾ ಹುಬ್ಬಳ್ಳಿ-ಧಾರವಾಡ ಪೇಡ , ಬೆಳಗಾಂ ಕುಂದ ಅಂದಾಕ್ಷಣ ಎಲ್ಲರ ಬಯಲ್ಲಿ ನೀರೂರುತ್ತಿತ್ತು. ಕೈಗೆಟುಕದ ಈ ಸ್ವೀಟ್‌ಗಳಿಗೆ ಜನ ಕಾತರಿಸಿ, ಯಾರಾದರೂ ಈ ಊರುಗಳಿಗೆ ಧಾವಿಸಿದರೆ ಸಾಕಪ್ಪಾ, ಪೇಡಾ ತಂದರೆ ಸಾಕಪ್ಪಾ ಎನ್ನುವ ಸಮಯವೊಂದಿತ್ತು. ಅದರಲ್ಲೂ ಪುಟಾಣಿ ಮಕ್ಕಳಿಗಂತೂ ಈ ಪೇಡಾ ಸಿಕ್ಕಿದರೆ ಅದೇ ಪರಮಕುಷಿ ಅಂತಾಗಿತ್ತು..ಈಗ ಆ ದಿನಗಳು ಮನೆ ಬಾಗಿಲಿಗೆ ತಲುಪುವಂತಿದೆ. ದೂರದ ಹುಬ್ಬಳ್ಳಿ , ಧಾರವಾಡದ ಪೇಡಾಗಳು, ಕುಂದ ಇನ್ನೂ ಇತ್ಯಾದಿ ಸ್ವೀಟ್‌ಗಳ ಸಾಲನ್ನು ಮುತ್ತಿನ ನಗರಿ ಪುತ್ತೂರು ಸ್ವೀಟ್ ಆಗಿ ಹೊತ್ತು ತರುತ್ತಿದೆ;. ದೂರದೂರಲ್ಲಿ ಮಾತ್ರ ಸಿಗುತ್ತಿದ್ದ ಪೇಡಾಗಳನ್ನು ಚಪ್ಪರಿಸಲು ಈಗ ಸಮೀಪದಲ್ಲಿಯೇ ಸಾಧ್ಯವಿದೆ. ಹೌದು, ಇದೀಗ ಪುತ್ತೂರಿನಲ್ಲಿ ಮಿಶ್ರ ಫೆಡಾ ಫ್ರಾಂಚೈಸಿ ಈ ನೂತನ ರುಚಿಯನ್ನು ನೀಡಲು ಸನ್ನದ್ಧವಾಗಿ ನಿಂತಿದೆ. ಪುತ್ತೂರಿನ ಹೃದಯಭಾಗದಲ್ಲಿರುವ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗದ ಎ ಎಂ ಕಾಂಪ್ಲೆಕ್ಸ್ ನಲ್ಲಿ ಡಿ 17ರಂದು ಬಿಗ್ ಮಿಶ್ರಾ ಫೆಡಾ ಫ್ರಾಂಚೈಸಿ ಶುಭಾರಂಭಗೊಳ್ಳುತ್ತಿದೆ.
1933ರಲ್ಲಿ ಹುಬ್ಬಲ್ಳಿಯಲ್ಲಿ ಧಾರವಡ ಪೇಡದೊಂದಿಗೆ ಆರಂಭವಾದ ಮಿಶ್ರಾ ಫೆಡಾ ಇಂದು ಸುಮಾರು 500ರಷ್ಟು ಸ್ವೀಟ್ ಐಟಂಗಳೊAದಿಗೆ ಕೇವಲ ಕರ್ನಾಟಕ ಮಾತ್ರವಲ್ಲದೇ ಕೇರಲ, ಗೋವಾದಲ್ಲೂ ತನ್ನ ಶ್ರೇಷ್ಠವಾದ ಗುಣಮಟ್ಟದ ಸೇವೆ ಹಾಗೂ ರುಚಿಯಿಂದ ವ್ಯಾವಹಾರಿಕವಾಗಿಯೂ ವಿಸ್ತರಿಸಿಕೊಂಡಿದ್ದು, ಗ್ರಾಹಕರ ಪಾಲಿನ ಅಚ್ಚುಮೆಚ್ಚಿನ ಸಿಹಿಉತ್ಪನ್ನವಾಗಿ ಗುರುತಿಸಿಕೊಂಡಿದೆ. ಬೇಕರಿ ಐಟಂಗಳು, ಬಿಗ್ ಬ್ರೆಡ್, ಕುಕೀಸ್, ಬಿಸ್ಕತ್,ಇನ್ಸಾ0ಟ್ ಮಿಕ್ಸ್, ಮಸಾಲಾ ಐಟಂ, ಮಿಲ್ಕ್ ಪ್ರೊಡಕ್ಟ್, ಪನ್ನೀರ್‌ನಂತಹ ಹಲವು ರೀತಿಯ ಬೇಕರಿ ಸಂಬAಧಿತ ಐಟಂಗಳನ್ನು ಉತ್ಪಾದಿಸಿ ಮಾರುಕಟ್ಟೆಯಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದೆ ಇದೇ ಮಿಶ್ರ ಪೇಡಾ…ಅವದ್ ಬಿಹಾರಿ ಮಿಶ್ರಾರವರು ಸ್ಥಾಪಿಸಿದ ಈ ಸಂಸ್ಥೆಯ ನಿರ್ದೇಶಕರಾಗಿ ಅವರ ಪುತ್ರ ಗಣೇಶ್ ಮಿಶ್ರಾ ಮತ್ತು ಮೊಮ್ಮಗ ಸಂಜಯ್ ಗಣೇಶ್ ಮಿಶ್ರಾ ಕಾರ್ಯನಿರ್ವಹಿಸುತ್ತಿದ್ದು ತಮ್ಮ ಮಾರುಕಟ್ಟೆಯನ್ನು ಅಂತರಾಜ್ಯದಲ್ಲೂ ವಿಸ್ತರಿಸಿದ್ದು ಮಂಗಲೂರಿನಲ್ಲೂ ಈಗಾಗಲೇ ನಾಲ್ಕು ಫ್ರಾಂಚೈಸಿಗಳನ್ನು ಹೊಂದಿಕೊ0ಡಿದ್ದಾರೆ.
ಮಾರುಕಟ್ಟೆ ಪೂರೈಕೆ ಹೇಗೆ ಅಂತಿರಾ?!ಸಾಮಾನ್ಯವಾಗಿ ಮಿಶ್ರಾ ಫೆಡಾ ಉತ್ಪನ್ನಗಳು ತಯಾರಾಗುವುದು ಹುಬ್ಬಳ್ಳಿಯ ಶಹರಿನೊಳಗೆ. ಆದರೆ ಇವೆಲ್ಲವೂ ಮುಂಜಾನೆಯಾಗುವುದರೊಳಗೆ ಬೇಕಾದ ಜಾಗವನ್ನು ತಲುಪಿ ಹಂಚಿಕೆಯಾಗುತ್ತದೆ.ಪುತ್ತೂರಲ್ಲೂ ಮಿಶ್ರಾಫೆಡಾ ಹವಾ: ಪುತ್ತೂರನ್ನು ಮುತ್ತಿನ ನಗರಿ ಅಂತ ಬಾರೀ ಗೌರವದಿಂದ ಕರೆಯಲಾಗುತ್ತದೆ. ಜತೆಗೆ ಕ್ಯಾಂಪ್ಕೋ ಚಾಕಲೇಟ್ ಕೂಡಾ ಭಾರೀ ಗುಣಮಟ್ಟದೊಡನೆ ಉತ್ಪಾದನೆಗೊಳ್ಳುವುದು ಇದೇ ಪುತ್ತೂರಿನ ಪುಣ್ಯದ ನಾಡಿನಲ್ಲಿ. ದಿನದಿಂದ ದಿನಕ್ಕೆ ಸ್ಮಾರ್ಟ್ ಆಗುತ್ತಿರುವ ಪುತ್ತೂರು ನಗರ ದಿನಕ್ಕೊಂದು ಹೊಸತನದ ಗಾಳಿಯನ್ನು ಬೀಸುತ್ತಲೇ ಇದೆ. ಇದೀಗ ಸ್ವೀಟ್ ಐಟಂಗಳಲ್ಲೂ ನೂತನ ಬ್ರಾಂಡ್ ಕ್ರಿಯೇಟ್ ಮಾಡುವ ಕನಸು ಇಲ್ಲಿದ್ದು, ಇದಕ್ಕೆ ಪುಷ್ಟಿ ಕೊಡುವಂತಿದೆ ಸಿಹಿ ಸಿಹಿ ಫೆಡಾಗಳ ಈ ಫ್ರಾಂಚೈಸಿ….