ಜನಪ್ರಿಯ ಸೀರಿಯಲ್ ‘ಕನ್ನಡತಿ’ಯ ಹೀರೋ ಕಿರಣ್‌ರಾಜ್ ಇದೀಗ ಚಿಕನ್ ಪುಳಿಯೋಗರೆ ಸಿನಿಮಾದ ಮೂಲಕ ಹೊಸ ಪ್ರೇಮಕತೆ ಹೇಳಲು ಹೊರಟಿದ್ದಾರೆ. ಚಿಕನ್ ಅಂದ್ರೆ ಹುಡುಗ, ಪುಳಿಯೋಗರೆ ಅಂದ್ರೆ ಬ್ರಾಹ್ಮಣ ಹುಡುಗಿ,ಈ ಚಿತ್ರ ಇವರಿಬ್ಬರ ನಡುವಿನ ಪ್ರೇಮ ಕಥೆ ಇರಬಹುದಾ..?
ನಿಜ, ಇದು ಭಿನ್ನ ಹಿನ್ನೆಲೆಯ ಹುಡುಗ- ಹುಡುಗಿ ಪ್ರೇಮ ಕತೆ. ಜೊತೆಗೆ ಆ್ಯಕ್ಷನ್ನೂ ಇದೆ. ಪ್ರೀತಿ ಇರಬಹುದು, ಇನ್ಯಾವುದೇ ವಿಷಯ ಇರಬಹುದು, ಒಂದು ಹಂತದಲ್ಲಿ ನಾವು ಯಾವ ಲೆವೆಲ್‌ಗೆ ಇಳಿಯೋದಕ್ಕೂ ಸಿದ್ಧ ಇರ್ತೀವಿ. ಆದರೆ ಅದು ಕ್ಷಣಿಕ, ಕೊನೆಗೆ ಗೆಲ್ಲೋದು ನಮ್ಮ ಸ್ವಾಭಿಮಾನವೇ. ಈ ಸಂಗತಿಯೂ ಚಿತ್ರದಲ್ಲಿ ಬರುತ್ತೆ. ಇದನ್ನು ಕಾಲೇಜ್ ಹುಡುಗ್ರು ಹುಡುಗೀರೂ ಕೂಡಾ ಸಖತ್ತಾಗಿ ಎಂಜಾಯ್ ಮಾಡ್ತಾರೆ ಅಂತಿದೆ ಚಿತ್ರ ತಂಡ.
ಈ ಚಿತ್ರದ ಮೂಲಕ ಚಂದನವನದ ಬಣ್ಣದ ಜಗತ್ತಿಗೆ ಕಾಲಿಡುತ್ತಿದ್ದಾರೆ ಕರಾವಳಿ ಬೆಡಗಿ ‘ರಚನಾ ರೈ'(ಶ್ರಾವ್ಯ ರೈ), ರಚನಾ ರೈ ಎಸ್ ಡಿಎಂ ಕಾಲೇಜಿನ ಹಳೆ ವಿಧ್ಯಾರ್ಥಿನಿ, ಪ್ರಸ್ತುತ ಪುತ್ತೂರಿನಲ್ಲಿ ವಾಸವಿರುವ ಇವರು ವಿವೇಕಾನಂದ ಕಾಲೇಜಿನಲ್ಲಿ ಜರ್ನಲಿಸಂ ನಲ್ಲಿ ಪದವಿ ವಿದ್ಯಾಭ್ಯಾಸವನ್ನು ಮುಗಿಸಿರುತ್ತಾರೆ. ಬಾಲ್ಯದಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ರಚನಾ ಬ್ಯಾಡ್ಮಿಂಟನ್ ಆಟಗಾರ್ತಿಯೂ ಹೌದು.. ಜೊತೆಗೆ ರೂಪದರ್ಶಿ(ಮಾಡೆಲ್)ಯಾಗಿಯೂ ಮಿಂಚಿದ್ದಾರೆ. ಬಣ್ಣದ ಜಗತ್ತಿಗೆ ಕಾಲಿಡುತ್ತಿರುವ ‘ರಚನಾ ರೈ’ ಇನ್ನಷ್ಟು ಚಿತ್ರಗಳ ಮೂಲಕ ಬಣ್ಣದ ಜಗತ್ತಿನಲ್ಲಿ ಮಿಂಚಲಿ ಎಂಬುದು ನಮ್ಮ ಆಶಯ.
✍️. ವಿಶು ರೈ