ಬೆಂಗಳೂರು: ಕೇರಳ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವೇಶಿಸುವವರಿಗೆ RTPCR ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯವಾಗಿದೆ. ಈ ಹಿಂದೆ ಮೊದಲ ಕೋವಿಡ್ ಡೋಸ್ ಪಡೆದವರಿಗೆ ನೆಗೆಟಿವ್ ರಿಪೋರ್ಟ್ ತರುವುದಕ್ಕೆ ವಿನಾಯಿತಿ ನೀಡಲಾಗಿತ್ತು. ಆದರೆ, ಇದೀಗ ಲಸಿಕೆ ಪಡೆದಿದ್ದರೂ ರಾಜ್ಯಕ್ಕೆ ಬರಬೇಕು ಅಂದರೆ 72 ಗಂಟೆಗಳ ಕಡ್ಡಾಯ ರಿಪೋರ್ಟ್ ತರಲೇಬೇಕು ಎಂದು ಕರ್ನಾಟಕ ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ ಚಂದ್ರ ಅವರು ತಿಳಿಸಿದ್ದಾರೆ.
ಕೋವಿಡ್ ಮೂರನೇ ಅಲೆ ಕಾರಣಕ್ಕೆ ಆರೋಗ್ಯ ಇಲಾಖೆ ಹಲವು ಟಫ್ ರೂಲ್ಸ್ ಜಾರಿ ಮಾಡಲು ಯೋಚನೆ ನಡೆಸಿದೆ. ಕೆಲ ನಿರ್ಬಂಧಕ್ಕೆ ಕೊಟ್ಟಿದ್ದ ವಿನಾಯಿತಿಯನ್ನೂ ಹಿಂಪಡೆದಿದೆ. ಅದರಲ್ಲಿ ಮುಖ್ಯವಾಗಿ, ಕೇರಳ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಜನರಿಗೆ RTPCR ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯವಾಗಿದೆ. ಈ ಹಿಂದೆ ಮೊದಲ ಕೋವಿಡ್ ಡೋಸ್ ಪಡೆದವರಿಗೆ ನೆಗೆಟಿವ್ ರಿಪೋರ್ಟ್ ತರುವುದಕ್ಕೆ ವಿನಾಯಿತಿ ನೀಡಲಾಗಿತ್ತು.
ಆದರೆ, ಇದೀಗ ಲಸಿಕೆ ಪಡೆದಿದ್ದರೂ ರಾಜ್ಯಕ್ಕೆ ಬರಬೇಕು ಅಂದರೆ 72 ಗಂಟೆಗಳ ಕಡ್ಡಾಯ ರಿಪೋರ್ಟ್ ತರಲೇಬೇಕು. ಈ ವಿನಾಯಿಯನ್ನು ವಾಪಸ್ ಪಡೆದಿದ್ದೇವೆ. ಕಳೆದೊಂದು ವಾರದಲ್ಲಿ ಎವರೇಜ್ ಕೇಸ್ಗಳು ವರದಿಯಾಗಿವೆ. ಕೇರಳದ ಬಳಿ ಇರುವ ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನದ ಕಡೆ ಪ್ರಕರಣಗಳು ಹೆಚ್ಚಾಗ್ತಿದೆ.
ಹೀಗಾಗಿ ಆ ಭಾಗದಲ್ಲಿ ಕೋವಿಡ್ ಟೆಸ್ಟಿಂಗ್ ಹೆಚ್ಚು ಮಾಡಿದ್ದೇವೆ. ಹಾಗೇ ಕಾಂಟಾಕ್ಟ್ ಟ್ರೆಸಿಂಗ್ ಮಾಡಲಾಗುತ್ತಿದೆ. ಗಡಿ ಭಾಗದ ಚೆಕ್ ಪೋಸ್ಟ್ಗಳನ್ನ ಈಗಾಗಲೇ ನಿರ್ಮಾಣ ಮಾಡಿದ್ದು, ಆಯಾ ಜಿಲ್ಲಾಡಳಿತಕ್ಕೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗಿದೆ ಅಂತ ತಿಳಿಸಿದರು.