ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಹೊಸ ಹೇರ್ಸ್ಟೈಲ್, ಸದ್ಯ ಟ್ರೆಂಡಿಂಗ್ ಸೃಷ್ಟಿಯಾಗ್ತಿದೆ. ಮಾಹಿಯ ನ್ಯೂ ಲುಕ್ಗೆ ಕ್ರಿಕೆಟ್ ಫ್ಯಾನ್ಸ್ ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಹಬ್ಬದಂತೆ ಸೆಲೆಬ್ರೇಟ್ ಮಾಡ್ತಿದ್ದಾರೆ. ಕ್ಯಾಪ್ಟನ್ ಕೂಲ್ ಚಿತ್ರಗಳನ್ನ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟರ್ ಆಲಿಮ್ ಹಕೀಮ್, ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಜಾಲತಾಣದಲ್ಲಿ ಈ ಪೋಟೋಗಳು ಧೂಳೆಬ್ಬಿಸುತ್ತಿವೆ.
ಫೇಮಸ್ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರು ವರುಣ್ ಧವನ್, ಅರ್ಜುನ್ ಕಪೂರ್, ಅಜಯ್ ದೇವಗನ್ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ಹಲವು ಬಾಲಿವುಡ್ ಸೆಲಿಬ್ರಿಟಿಗಳಿಗೆ ನ್ಯೂ ಲುಕ್ ನೀಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಇದಕ್ಕೂ ಮುನ್ನ ಯಜುವೇಂದ್ರ ಚಹಲ್ಗೂ ಕೇಶ ವಿನ್ಯಾಸ ಮಾಡಿದ್ದರು.