ಮಂಗಳೂರು: ಕೆಲ ದಿನಗಳ ಹಿಂದೆ ಹೆಬ್ರಿಯಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ರವರಿಗೆ ಮಂಜುನಾಥ ಪೂಜಾರಿಯವರು ದೈವದ ಕಡ್ಸಲೆಯನ್ನು ನೀಡಿದ್ದು, ಕರಾವಳಿಯಲ್ಲಿ ಈ ವಿಷಯ ಭಾರೀ ಸದ್ದು ಮಾಡಿತ್ತು.. ಅದೇ ರೀತಿಯಲ್ಲಿ ಈಗ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ..
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ದಯಾನಂದ್ ಕತ್ತಲ್ ಸಾರ್ ರವರು ದೈವದ ಮೊಗವನ್ನು ಸ್ಮರಣಿಕೆಯಾಗಿ ಪಡೆಯುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
“ಮೊನ್ನೆ ಡಿಕೆಶಿಗೆ ಕಡ್ಸಲೆ ನೀಡಿದಾಗ ಹೆಬ್ರಿಯ ಮಂಜುನಾಥ ಪೂಜಾರಿ ಅವರು ಮಾಡಿದ್ದು ತಪ್ಪು ಎಂದಿದ್ದು ನೀವೇ ಅಲ್ವಾ!? ಈಗ ನೀವೇ ಸಂತೋಷದಿಂದ ದೈವದ ಮೊಗದ ಸ್ಮರಣಿಕೆಯನ್ನು ಸ್ವೀಕರಿಸುತ್ತಿದ್ದೀರಿ”… ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದು, ಸದ್ಯ ಈ ವಿಷಯವಾಗಿ ಭಾರೀ ಮಟ್ಟದ ಚರ್ಚೆಗಳು ನಡೆಯುತ್ತಿದೆ..