ಪುತ್ತೂರು: ಶರ್ಮಾನ್ ಸೊಸೈಟಿ ಸಂಬಂಧಿಸಿದ ನಿರ್ದೇಶಕರ ಆಸ್ತಿ ಜಪ್ತಿಗೆ ಆದೇಶ ಮಾಡಿದ್ದ ಸರಕಾರದ ಆದೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದೆ.
ಪುತ್ತೂರಿನ ಶರ್ಮಾನ್ ಸೊಸೈಟಿಗೆ ಸಂಬಂಧಿಸಿದ ಹಣಕಾಸಿನ ಅವ್ಯವಹಾರ ನಡೆದಿದೆ ಎಂದು ಸರಕಾರದಿಂದ ನಿರ್ದೇಶಕರ ಆಸ್ತಿ ಜಪ್ತಿಗೆ ಆದೇಶವನ್ನು ಹೊರಡಿಸಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರೂ ಸರಕಾರದಿಂದ ತಡೆಯಾಜ್ಞೆ ಆದೇಶವನ್ನು ಹೊರಡಿಸಿದೆ.
ಪಿ.ಎಸ್. ದಿನೇಶ್ ಕುಮಾರ್ ಇವರ ಏಕಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ.
ಮುಂದಿನ ಆದೇಶದ ವರೆಗೆ ಆಸ್ತಿಗಳಿಗೆ ಸಂಬಂಧಪಟ್ಟಂತೆ ಯಾವುದೇ ಆದೇಶಗಳನ್ನು ಮಾಡದಂತೆ ತಡೆಯಾಜ್ಞೆಯನ್ನು ಹೊರಡಿಸಿದೆ.
ಈ ಆದೇಶದಿಂದ ಬಜರಂಗದಳದ ಮುಖಂಡ, ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಸೇರಿದಂತೆ ನಿರ್ದೇಶಕರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.
ಕೃಷ್ಣನಾಯ್ಕ್ ಪರ ಖ್ಯಾತ ಹೈಕೋರ್ಟ್ ನ್ಯಾಯವಾದಿ ರಾಜಶೇಖರ ಹಿಳಿಯಾರು ರವರು ವಾದವನ್ನು ಮಂಡಿಸಿದರು.