ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈಯವರಿಗೆ ಸಚಿವ ಸ್ಥಾನ ದೊರೆಯುವಂತೆ ಮತ್ತು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಸರ್ಕಾರ ಮುನ್ನಡೆಸುವಂತೆ ಮೇ.30 ರಂದು ಕಾಂಗ್ರೆಸ್‌ನಿಂದ ಪುತ್ತೂರಿನ ಸರ್ವ ಧರ್ಮಗಳ ಆರಾಧನಾ ಕೇಂದ್ರದಲ್ಲಿ ಪ್ರಾರ್ಥನೆ ನಡೆಯಲಿದೆ.
ಪುತ್ತೂರು ಬ್ಲಾಕ್ ವಲಯ ಅಧ್ಯಕ್ಷರು ಮತ್ತು ವಲಯ ಉಸ್ತುವಾರಿಗಳ ನೇತೃತ್ವದಲ್ಲಿ ಆಯಾ ಗ್ರಾಮದಲ್ಲಿರುವ ಪ್ರಮುಖ ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಮಧ್ಯಾಹ್ನ 11.45ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಅಳ್ವ ತಿಳಿಸಿದ್ದಾರೆ.


























