ನಿಡಳ್ಳಿ; ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತಪೂಜಾ ಸಮಿತಿ ಆರ್ಲಪದವು ಪಾಣಾಜೆ ಇದರ ವತಿಯಿಂದ ನಡೆಯುವ 4 ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ವರಮಹಾಲಕ್ಷ್ಮೀ ವ್ರತ ಕಥಾ ಪ್ರವಚನ ಕಾರ್ಯಕ್ರಮ ಆ.28 ರಂದು ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಜು.12 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.
ಹೈ ಕೋರ್ಟು ವಕೀಲರಾದ ಶ್ರೀರಾಜಾರಾಮ್ ಸೂರ್ಯಂಬೈಲು, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಬೋಳಿಲ್ಲಾಯ, ಸದಾಶಿವ ರೈ ನೆಲ್ಲಿತ್ತಿಮಾರು, ವಿಶ್ವನಾಥ್ ರೈ ಸೂರಂಬೈಲು, ನಾರಾಯಣಪ್ರಕಾಶ್ ಕಡಮಾಜೆ, ಯತೀರಾಜ ಶೆಟ್ಟಿ ಸೂರಂಬೈಲ್, ಶ್ರೀಹರಿ ನಡುಕಟ್ಟಿ, ಶ್ರೀ ಪ್ರಸಾದ್ ನಡುಕಟ್ಟಿ, ಶ್ರೀನಿವಾಸ ಮಂಟಮೆ, ರಮಾನಾಥ ರೈ, ಗೀತಾ ರೈ ಪಡ್ಯಂಬೆಟ್ಟು, ಶಾರದಾ ಗೋಪಾಲ ಕೊಂದಲ್ಕಾನ , ಸುಜಾತಾ ರೈ, ದೇವಿಕಾ ರೈ, ವೇದಾವತಿ, ಅನುರಾಧ, ಮಮತ, ಉಷಾ, ಸುಚೇತಾ ರೈ, ಲಕ್ಷ್ಮಿನಾರಾಯಣ ರೈ ಕೆದಂಬಾಡಿ, ಡಾ. ಅಖಿಲೇಶ್ ಅರ್ಧಮೂಲೆ, ರತ್ನಕುಮಾರಿ ಗುಲಾಬಿ ರೈ ಮೊದಲಾದ ಗಣ್ಯರು ಹಾಜರಿದ್ದರು.


























