ಉಪ್ಪಿನಂಗಡಿ : ಪ್ರಸಕ್ತ ದೇಶದೊಳಗೆ ದೇಶ ದ್ರೋಹಿಗಳ ಪ್ರಾಬಲ್ಯ ಹೆಚ್ಚುತ್ತಿದ್ದು, ಹಿಂದೂ ಸಮಾಜದ ಮೇಲೆ ನಾನಾ ರೂಪದಲ್ಲಿ ಆಕ್ರಮಣಗಳು ನಡೆಯುತ್ತಿದೆ, ದೇಶದ ವಿವಿದೆಡೆ ಹಿಂದೂ ಸಮಾಜದ ಮೇಲೆ ಸರಕಾರಿ ಪ್ರಾಯೋಜಿತ ಆಕ್ರಮಣಗಳು ನಡೆಯುತ್ತಿದ್ದು, ಧರ್ಮ ರಕ್ಷಣೆಯ ಮುಖಾಂತರ ರಾಷ್ಟ್ರ ರಕ್ಷಣೆಯತ್ತ ಇಡೀ ಸಮಾಜ ಒಗ್ಗೂಡಬೇಕೆಂದು ಹಿಂದೂ ಜಾಗರಣ ವೇದಿಕೆಯ ಮುಂದಾಳು ಚಿನ್ಮಯ್ ಈಶ್ವರಮಂಗಲ ಹೇಳಿದರು.
ಅವರು ಆದಿತ್ಯವಾರದಂದು ಉಪ್ಪಿನಂಗಡಿಯ ನೇತ್ರಾವತಿ ಸಮುದಾಯ ಭವನದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಉಪ್ಪಿನಂಗಡಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಹರಿರಾಮಚಂದ್ರ ಮಾತನಾಡಿ, ಯಾವುದೇ ಸಂಘಟನೆಯನ್ನು ಕಟ್ಟುವುದು ಮತ್ತು ಮುನ್ನಡೆಸುವುದರ ಮೂಲ ಉದ್ದೇಶ ಸಮಾಜದ ಹಿತಾಸಕ್ತಿಯಾಧಾರಿತವಾಗಿರಬೇಕೆಂದರು. ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಮುಂದಾಳುಗಳಾದ ವೆಂಕಟರಮಣ ಕುತ್ಯಾಡಿ, ಮಲ್ಲೇಶ್ ಅಲಂಕಾರು, ರಾಜೇಶ್ ಪಂಚೋಡಿ ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯ, ಪ್ರಮುಖರಾದ ನರಸಿಂಹ ಶೆಟ್ಟಿ ಮಾಣಿ, ಉಮೇಶ್ ಶೆಣೈ, ಜಯಂತ ಪುರೋಳಿ, ಸುನಿಲ್ ದಡ್ಡು, ರಾಜಗೋಪಾಲ ಹೆಗ್ಡೆ, ಚಂದ್ರಶೇಖರ್ ಮಡಿವಾಳ, ಅಕ್ಷಯ್ ಹರಿನಗರ, ದೇವರಾಜ್, ಚಂದ್ರಶೇಖರ್,ಸಂದೀಪ್ ಕುಪ್ಪೆಟ್ಟಿ, ಆದರ್ಶ ಕಜೆಕಾರ್, ಚಿದಾನಂದ ಪಂಚೇರು , ಅನಿಲ್ , ಮನೋಹರ ಬಿಳಿಯೂರು, ಆಕೃತಿ ಬಿಳಿಯೂರು ಭಾಗವಹಿಸಿದ್ದರು.