ಮಡಿಕೇರಿ: ಹಲ್ಲೆಗೊಳಗಾದ ಕೊಡಗಿನ ಸೈನಿಕನ ಮನೆಗೆ ಹಿಂದು ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಮತ್ತು ಪ್ರಾಂತ ಉಪಾಧ್ಯಕ್ಷ ಕಿಶೋರ್ ಮಂಗಳೂರು, ಮಂಗಳೂರು ವಿಭಾಗ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ ಭೇಟಿ ನೀಡಿದರು. ಹಾಗೂ ಸೈನಿಕ ಮತ್ತು ಅವರ ಕುಟುಂಬಕ್ಕೆ ಧೈರ್ಯ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ಕಾರಂತ್ ಅವರು ದೇಶವನ್ನು ಕಾಯುವ ಸೈನಿಕನ ಮೇಲಾದ ಹಲ್ಲೆ ಕೇವಲ ಸೈನಿಕ ಮತ್ತು ಆತನ ಕುಟುಂಬದ ಮೇಲಾದ ಹಲ್ಲೆ ಅಲ್ಲ ಅದು ಬಿಡಿ ಭಾರತ ದೇಶದ ಕೋಟ್ಯಂತರ ದೇಶಾಭಿಮಾನಿ ಗಳ ಮೇಲಾದ ಹಳ್ಳೆಯಾಗಿದೆ.ಇದನ್ನು ಸಹಿಸಲು ಸಾಧ್ಯವಿಲ್ಲ ಇದರ ವಿರುದ್ಧ ಈಗಾಗಲೇ ಹಿಂದೂ ಜಾಗರಣ ವೇದಿಕೆ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ್ತೊಮ್ಮೆ ಆಗ್ರಹಿಸುತ್ತಿದ್ದೇವೆ ಒಂದು ವೇಳೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹಿಂದೂ ಜಾಗರಣ ವೇದಿಕೆ ಬೃಹತ್ ಹೋರಾಟವನ್ನು ಮಾಡಬೇಕಾಗುವುದೆಂದು ಎಚ್ಚರಿಸಿದರು. ನಮ್ಮ ಸುಖಕ್ಕಾಗಿ ಗಾಳಿ ಮಳೆ ಚಳಿಯನ್ನು ಲೆಕ್ಕಿಸದೆ ತನ್ನೆಲ್ಲ ಕುಟುಂಬವನ್ನು ಬಿಟ್ಟು ಭಾರತದ ಗಡಿಯಲ್ಲಿ ತನ್ನ ಪ್ರಾಣದ ಹಂಗನ್ನು ತೊರೆದು ಸೇವೆ ಸಲ್ಲಿಸುತ್ತಿದ್ದು ನಾವೆಲ್ಲರೂ ಅವರ ಋಣದಲ್ಲಿದ್ದೇವೆ, ಅಗತ್ಯ ಬಿದ್ದರೆ ಆ ಋಣವನ್ನು ತೀರಿಸುತ್ಹೇವೆ ಎಂದು ಹೇಳಿದರು.

ಈ ಸಂದರ್ಭ ಹಿಂದು ಜಾಗರಣ ವೇದಿಕೆ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಕುಕ್ಕೆರ, ಜಿಲ್ಲಾ ಕಾರ್ಯದರ್ಶಿ ಮಹೇಶ್,ಜಿಲ್ಲಾ ಪ್ರಚಾರ ಪ್ರಮುಖ್ ಕುಮಾರ್ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

