ಪುತ್ತೂರು: ಇಡೀ ರಾಜ್ಯವನ್ನು ತಲ್ಲಣಗೊಳಿಸಿದ ಪುತ್ತೂರು ಸೌಮ್ಯ ಭಟ್ ಕೊಲೆಗೆ ಭರ್ತಿ 24 ವರ್ಷ ಸಂದಿದೆ. 1997 ಆಗಸ್ಟ್ 7ರಂದು ಪುತ್ತೂರು ವಿವೇಕಾನಂದ ಕಾಲೇಜಿನ ಅಂತಿಮ ವರ್ಷದ ಬಿಎಸ್ ಸಿ ವಿದ್ಯಾರ್ಥಿನಿ ಸೌಮ್ಯಳ ಹತ್ಯೆ ನಡೆದಿತ್ತು.
ಸಂಜೆ 5 ಗಂಟೆಯ ಸಮಯಕ್ಕೆ ಸೌಮ್ಯ ಕಾಲೇಜು ಮುಗಿಸಿ ಕಬಕದಲ್ಲಿ ಬಸ್ಸಿನಿಂದ ಇಳಿದು ಕೆದಿಲಕ್ಕೆ ಹೋಗುವ ಒಳ ರಸ್ತೆಯಲ್ಲಿ ರೈಲ್ವೆ ಹಳಿಯನ್ನು ದಾಟಿ ತನ್ನಷ್ಟಕ್ಕೆ ನಡೆದುಕೊಂಡು ಹೋಗುತ್ತಿದ್ದಳು. ಅದೊಂದು ಗ್ರಾಮೀಣ ನಿರ್ಜನ ಪ್ರದೇಶ. ಅಕ್ಕಪಕ್ಕದಲ್ಲಿ ಎಲ್ಲೂ ಮನೆಗಳಿಲ್ಲ. ಮುಸುಕಿದ ಮೋಡ ಜತೆ ಹೊತ್ತು ಇಳಿ ಸಂಜೆಗೆ ಇಳಿದಿತ್ತು. ಸೌಮ್ಯ ತನ್ನ ಪಾಡಿಗೆ ತಾನು ಹೋಗುತ್ತಿದ್ದಳು.
ಒಂದೆರಡು ದಿನ ಮಂಚೆ ಆಶ್ರಫ್ ಮಿಲಿಟರಿಯಿಂದ ರಜೆ ಪಡೆದು ಕಬಕಕ್ಕೆ ಬಂದಿದ್ದ. ಅವನು ಭಾರತೀಯ ಸೇನೆಯಲ್ಲಿ ಮರಾಠ ಪದಾತಿ ದಳದ ಸೈನಿಕನಾಗಿದ್ದ. ಬಂದವನೇ ಎರಡು ದಿನದ ಹಿಂದೆ ಸೌಮ್ಯಳ ತಂದೆ ಪುರೋಹಿತ ಗಣಪತಿ ಭಟ್ ಅವರಲ್ಲಿ ಸೌಮ್ಯಳ ಬಗ್ಗೆ ವಿಚಾರಿಸಿದ್ದ. ಸೌಮ್ಯಳ ಕ್ಲಾಸ್ ಮೇಟ್ ಇರಬಹುದು ಎಂದು ಕೊಂಡು ಸೌಮ್ಯಳ ತಂದೆ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.
ಆಗಸ್ಟ್ 7 ರಂದು ಸಂಜೆ ಏನಾಯಿತು..?
ಮೋಡ ಮುಸುಕಿದ ಕತ್ತಲಾವರಿಸಿದ ಆ ಇಳಿ ಸಂಜೆ ಪುಸ್ತಕವನ್ನು ಎದೆಗವಚಿಕೊಂಡು ಬಿರ ಬಿರನೆ ಆ ನಿರ್ಜನ ರಸ್ತೆಯಲ್ಲಿ ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದ ಸೌಮ್ಯಳ ಎದುರು ಅ ನರರೂಪಿ ರಾಕ್ಷಸ ನಿಂತಿದ್ದ, ಅವನು ಅವಳನ್ನು ಕಬಕ ಬಸ್ ಸ್ಟ್ಯಾಂಡ್ ಅಲ್ಲಿಯೇ ನಿಂತು ಹೊಂಚು ಹಾಕಿ ಕಾಯುತ್ತಿದ್ದ . ಬಸ್ಸಿಂದ ಇಳಿದು ಅವಳು ಮನೆ ಕಡೆ ಹೆಜ್ಜೆ ಹಾಕುತ್ತಿದ್ದಂತೆ ಅವಳ ಬೆನ್ನ ಹಿಂದೆಯೇ ಅವನು ಹೆಜ್ಜೆ ಹಾಕಿದ್ದ. ಅವನು ಮೊದಲೇ ನಿಗದಿಪಡಿಸಿದ್ದ ನಿರ್ಜನ ಪ್ರದೇಶವನ್ನು ಸೌಮ್ಯ ರೀಚ್ ಆಗುವವರೆಗೆ ಕಾಯುತ್ತಿದ್ದ. ಅವಳು ಅಲ್ಲಿ ತಲುಪುತ್ತಲೇ ತನ್ನ ಕಾಮ ತೃಷೆಯನ್ನು ಪೂರೈಸಲು , ಈ ಸುಂದರ ರೂಪದ, ಕೋಮಲ ದೇಹದ ಮುಗ್ದ ಹೆಣ್ಣಿನ ಮೇಲೆ ಕೀಚಕನಂತೆ ಎರಗಿದ. ಸೌಮ್ಯಳನ್ನು ರಕ್ಷಿಸಲು ಯಾವ ಶ್ರೀಕೃಷ್ಣನು ಅಲ್ಲಿರಲಿಲ್ಲ. ಇವಳ ಚೀರಾಟ ಅ ನಿರ್ಜನ ಪ್ರದೇಶದಲ್ಲಿ ಯಾರಿಗೂ ಕೆಳಿಸದಾಯಿತ್ತು. ಆದರೂ ಅವಳು ಇವನ ಬಿಗು ಪಟ್ಟಿಗೆ ಬಗ್ಗಲಿಲ್ಲ , ಕೊಸರಾಡಿದಳು ಮತ್ತು ಅವನ ಹಿಡಿತದಿಂದ ತಪ್ಪಿಸಿಕೊಂಡಳು. ತಪ್ಪಿಸಿದವಳೇ ಓಟಕಿತ್ತಳು. ಅವನ ಜೊತೆ ಪ್ರತಿಭಟಿಸಿ ತಾನು ತನವಾಗಿ ರಕ್ಷಿಸಿ ಕೊಂಡಿದ್ದ ಮಾನವನ್ನು ಉಳಿಸಿಕೊಂಡಳು .ಅವಳು ಓಡಿ ತಪ್ಪಿಸಿಕೊಳ್ಳುವುದನ್ನು ನೋಡಿದ ಅಶ್ರಫ್ ವ್ಯಗ್ರನಾದ. ಅವನ ಜೇಬಿನಲ್ಲಿದ ಚಾಕು ಹೊರ ತೆಗೆದವನೇ ಅವಳನ್ನು ಬೆನ್ನಟ್ಟಿ ಇರಿದ. ಒಂದಲ್ಲಾ ಎರಡಲ್ಲ 32 ಬಾರಿ ಇರಿದಿದ್ದಾನೆ. ಅದೆಂತಾಹ ಕ್ರೂರಿ, ರಕ್ಕಸಿ ಪ್ರವೃತ್ತಿಯ, ನೀಚನಾಗಿರಬೇಕು ಅಶ್ರಫ್. ಕಣ್ಣಿನಲ್ಲಿ ರಕ್ತ ಇಲ್ಲದವ ಎಂಬ ಮಾತಿಗೆ ಜೀವಂತ ಉದಾಹರಣೆ ಅವನಾಗಿದ್ದ. ಕೇವಲ ತನ್ನ ತೃಷೆಯನ್ನು ತೀರಿಸಲಿಲ್ಲ ಎಂಬ ಏಕೈಕ ಕಾರಣಕ್ಕೆ ಅವಳನ್ನು ಕ್ರೂರವಾಗಿ 32 ಬಾರಿ ಇರಿದು ಇರಿದು ಕೊಂದಿದ್ದ. ಸೌಮ್ಯಳ ಕುತ್ತಿಗೆಯೊಳಗೆ ಚೂರಿ ಇರಿದು, ಚೂರಿಯನ್ನು ಒಂದು ಸುತ್ತು ತಿರುಗಿಸಿದ್ದ. ಅಷ್ಟು ಪೈಶಾಚಿಕವಾಗಿ ಹಲ್ಲೆ ಮಾಡಿದ್ದ . ಆಕೆ ಮತ್ತೆ ಕೊಸರಾಡುವ ಪ್ರಶ್ನೆಯೇ ಇರಲಿಲ್ಲ. ಅಲ್ಲೇ ಆಕೆ ಹೆಣವಾಗಿ ಹೋಗಿದ್ದಳು. ರಕ್ತ ಸಿಕ್ತ ದೇಹ ,ದೂರದಲ್ಲಿ ಬಿದ್ದಿದ್ದ ಪುಸ್ತಕಗಳು, ಅವರಿಬ್ಬರ ಸಂಘರ್ಷ ಕೊಸರಾಟಗಳಿಗೆ ಸಾಕ್ಷಿಯಾದ ರಸ್ತೆಯಲ್ಲಿನ ಗುರುತುಗಳು ನಡೆದ ಬೀಭತ್ಸ ಘಟನೆಯನ್ನು ವಿವರಿಸುತ್ತಿತ್ತು.
ಕೊಲೆ ಮಾಡಿ ಆಕೆಯ ಮೇಲಿದ್ದ ಬಟ್ಟೆಯನ್ನು ಅಸ್ತವ್ಯಸ್ತ ಮಾಡಿ ಅಶ್ರಫ್ ಅಲ್ಲಿಂದ ಓಟಕಿತ್ತಿದ್ದ . ಮಳೆ ನಿಧಾನವಾಗಿ ಸುರಿಯಲಾರಂಭಿಸಿತ್ತು. ಸೌಮ್ಯಳ ರಕ್ತ ಹರಿಯುವ ನೀರಿನೊಂದಿಗೆ ಮಿಳಿತವಾಗಿ ಚರಂಡಿಯನ್ನು ಸೇರಲು ಹವಣಿಸುತ್ತಿತ್ತು.., ದೇವರು ನಿರ್ಧಯಿಯಾಗಿದ್ದ. ಪ್ರಪಂಚದ ಅಷ್ಟು ಸುಖ ಸಂತೋಷಗಳನ್ನು ಅನುಭವಿಸಬೇಕಿದ್ದ ಸೌಮ್ಯ ಅತ್ಯಂತ ಕ್ರೂರವಾಗಿ ಕೊಲೆಯಾಗಿ ಹೋಗಿದ್ದಳು. ಸಾಯುವ ಗಳಿಗೆಯಲ್ಲಿ ಅದೆಷ್ಟೂ ನೋವು ಅನಭವಿಸಿತ್ತೋ ಆ ಮುಗ್ದ ಜೀವ. ಈ ಪ್ರಕರಣದ ಬಳಿಕ ಸೌಮ್ಯವಾಗಿದ್ದ ಪುತ್ತೂರು ರೌದ್ರವಾಗಿತ್ತು, ಹಿಂಸಾಚಾರ ಇಲ್ಲಿ ಭುಗಿಳೆದಿತ್ತು.
ಈ ಪ್ರಕರಣದ ಬಳಿಕ ಪುತ್ತೂರಿನಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಅಂಗಡಿ, ಮನೆ ಮೇಲೆ ದಾಳಿ ನಡೆದಿತ್ತು.
ತಕ್ಷಣ ಸ್ಥಳಕ್ಕೆ ಅಂದಿನ ಡಿವೈಎಸ್ಪಿ ಗಣಪತಿ,ಪುತ್ತೂರು ನಗರ ಸ್ಟೇಷನ್ ಇನ್ಸ್ ಪೆಕ್ಟರ್ ಜೆ. ಪಾಪಯ್ಯ , ಎಸ್ಐ. ರವೀಶ್ ಮತ್ತಿತರರು ಭೇಟಿ ನೀಡಿದರು. ಕೊಲೆ ನಡೆದು 3 ತಾಸಿನೊಳಗೆ ಆರೋಪಿ ಅಶ್ರಫ್ ನನ್ನು ಬಂಧಿಸಲಾಯಿತು.
ಈ ನಡುವೆ ಆತ ಮಾನಸಿಕ ಅಸ್ವಸ್ಥ ,ಹುಚ್ಚಾ, ಸೈಕೋ ಎಂದು ಬಿಂಬಿಸುವ ಪ್ರಯತ್ನಗಳು ನಡೆದವು. ಆ ಮೂಲಕ ಘಟನೆಯನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆಯಿತು.
ಅದಾದ ಎರಡು ತಿಂಗಳಲ್ಲಿ ಆರೋಪಿ ಮಂಗಳೂರಿನಿಂದ ತಪ್ಪಿಸಿ ಕೊಳ್ಳುತ್ತಾನೆ. ಕೆಲವೇ ದಿನದಲ್ಲಿ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬಳಿ ಅವನನ್ನು ಬಂಧಿಸಲಾಗುತ್ತದೆ. ಅದಾದ ಎರಡೂ ವರ್ಷದಲ್ಲಿ ಆಶ್ರಫ್ ಮತ್ತೆ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಾನೆ . ಹೀಗೆ ತಪ್ಪಿಸಿಕೊಂಡ ಅಶ್ರಫ್ ಇದುವರೆಗೆ ಮತ್ತೆ ಸೆರೆಯಾಗುವುದೇ ಇಲ್ಲ.
ಚುನಾವಣೆ ಬಂದಾಗಲೆಲ್ಲ ಈ ಘಟನೆಯನ್ನು ಮತ್ತೆ ಮತ್ತೆ ನೆನಪಿಸಿ ಓಟು ಪಡೆಯುವವರು ಈಗಲೂ ನಮ್ಮಲ್ಲಿ ಇದ್ದಾರೆ.