ಗುರುಪುರ : ಕಂಬಳ ಕ್ಷೇತ್ರದಲ್ಲಿ ತನ್ನದೇ ಹೆಸರಿನ ಮೂಲಕ ಅಡ್ಡ ಹಲಗೆಯ ಕಂಬಳ ಕ್ರೀಡೆಯಲ್ಲಿ ಛಾಪನ್ನು ಮೂಡಿಸಿದ ಗುರುವಪ್ಪ ಪೂಜಾರಿ ರಸ್ತೆ ಅಪಘಾತದಿಂದಾಗಿ ಆ. 8 ರಂದು ನಿಧನರಾದರು.
ಕಾರು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಮಂಗಳೂರು ಹೊರವಲಯದ ಗುರುಪುರ ದ ಕುಕ್ಕುದಕಟ್ಟೆಯಲ್ಲಿ ಈ ದುರಂತ ನಡೆದಿದೆ.
ಕಳೆದ 47 ವರ್ಷದಿಂದ ಕಂಬಳ ಕೋಣಗಳ ಮೂಲಕ ಜನಪ್ರಿಯರಾಗರುವ ಇವರು ಒಂದಷ್ಟು ಕೃಷಿಭೂಮಿ ಯನ್ನೂ ಹೊಂದಿದ್ದು ಬಾಲ್ಯದ ದಿನಗಳಿಂದಲೇ ಕಂಬಳದ ಮೇಲೆ ಆಸಕ್ತರಾಗಿದ್ದರು.
ತನ್ನ ಗದ್ದೆ ಉಳಲೆಂದು ಉತ್ತಮ ಜಾತಿಯ ಕೋಣಗಳನ್ನು ತಂದು, ಕೃಷಿ ಕೆಲಸ ಮುಗಿದ ಬಳಿಕ ಕಂಬಳ ಗದ್ದೆಗಳಲ್ಲಿ ಓಡಿಸಿ ಖುಷಿ ಪಡೆಯುತ್ತಿದ್ದರು. ಮುಂದೆ, ದೂರದ ಊರುಗಳಲ್ಲಿ ನಡೆಯುವ ಕಂಬಳಗಳತ್ತ ಗಮನ ಕೇಂದ್ರೀಕರಿಸಿದ ಇವರು ಕಂಬಳಕ್ಕಾಗಿಯೇ ಹುಬ್ಬಳ್ಳಿ, ಕೋಟಾ ಮೊದಲಾದ ಕಡೆಯಿಂದ ಉತ್ತಮ ಜಾತಿಯ ಕೋಣಗಳನ್ನು ತಂದು, ಪಳಗಿಸುವುದರಲ್ಲಿ ಎತ್ತಿದ ಕೈ. ಇವರು ಅಡ್ಡ ಹಲಗೆ, ಹಗ್ಗದ ಹಿರಿ-ಕಿರಿ ವಿಭಾಗ, ನೇಗಿಲಿನ ಹಿರಿ-ಕಿರಿ ವಿಭಾಗ, ದೊಡ್ಡ ವಿಭಾಗ ಹಾಗೂ ಕಣೆಹಲಗೆ ವಿಭಾಗದ ಕೋಣಗಳ ಸ್ಪರ್ಧೆಯಲ್ಲಿ ಪಳಗಿದವರಾಗಿದ್ಧು ಕಂಬಳದ ಬೊಳ್ಳಿ ಕೆದು ಬರಿ ಗುರುವಪ್ಪ ಪೂಜಾರಿ ಎಂದೇ ಖ್ಯಾತರಾಗಿದ್ದ ಇವರು ತಮ್ಮ ಆಕ್ಟಿವಾದಲ್ಲಿ ಗುರುಪುರ ಬಳಿ ಹೋಗುತ್ತಿದ್ದ ವೇಳೆ ಕಾರಿಗೆ ಎದುರಾಗಿ ಭೀಕರ ಅಪಘಾತವಾಗಿ ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ಸಂಚಾರಿ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.