ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ B.C ಟ್ರಸ್ಟ್ (ರಿ.) ವಿಟ್ಲ ತಾಲೂಕು ಇದರ ವಿಟ್ಲ ವಲಯದ ವಿಟ್ಲ-ಪಡ್ನೂರು A ಒಕ್ಕೂಟದ ಹಾಗೂ ಶ್ರೀ ಮಲರಾಯಿ ಭಜನಾ ಮಂಡಳಿ (ರಿ.) ಕಾಪುಮಜಲು ಸಹಯೋಗದೊಂದಿಗೆ ಸ್ವಚ್ಚತಾ ಕಾರ್ಯಕ್ರಮವೂ ವಿಟ್ಲ-ಪಡ್ನೂರು ಗ್ರಾಮದ ಕಾಪುಮಜಲು ಶ್ರೀ ಮಲರಾಯಿ ದೈವಸ್ಥಾನದ ವಠಾರದಲ್ಲಿ ಆ.8 ರಂದು ನಡೆಯಿತು.
ಈ ಸಂದರ್ಭದಲ್ಲಿ ಧರ್ಮಸ್ಥಳ ಯೋಜನೆ ಒಕ್ಕೂಟದ ಮೇಲ್ವಿಚಾರಕರು, ಮತ್ತು ಪದಾಧಿಕಾರಿಗಳು, ವಿಟ್ಲ-ಪಡ್ನೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ನಾಗೇಶ್ ಶೆಟ್ಟಿ ಕೊಡಂಗಾಯಿ, ಕಾಪುಮಜಲು ಶ್ರೀ ಮಲರಾಯಿ ಭಜನಾ ಮಂಡಳಿಯ ಅಧ್ಯಕ್ಷರಾದ ಅರವಿಂದ ರೈ ಮೂರ್ಜೆಬೆಟ್ಟು, ಹಾಗೂ ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾಪುಮಜಲು ಶ್ರೀಮಲರಾಯಿ ಭಜನಾ ಮಂಡಳಿ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಯಿತು. ಸುಮಾರು 60-70 ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.