ಪುತ್ತೂರು:ಪುತ್ತೂರು ಜಾತ್ರೆಯಲ್ಲಿ ಏ.17ರಂದು ರಾತ್ರಿ ಸುಡುಮದ್ದು ಪ್ರದರ್ಶನ ಸಂದರ್ಭ ಸುಡುಮದ್ದಿನ ಬೆಂಕಿ ತಾಗಿ ಗಾಯಗೊಂಡವರು ಚೇತರಿಸಿಕೊಳ್ಳುತ್ತಿದ್ದಾರೆ.
ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ಮೂಲದ ಸುಮಂತ್ ಶೆಟ್ಟಿ(20ವ) ಗಾಯಗೊಂಡವರು. ಅವರನ್ನು ಮಂಗಳೂರು ಜ್ಯೋತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಮಂಗಳೂರುನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ ನಾನು ಏ.17ರಂದು ಸ್ನೇಹಿತರೊಂದಿಗೆ ಪುತ್ತೂರು ಜಾತ್ರೆಗೆ ಬಂದು ಸುಡುಮದ್ದು ವೀಕ್ಷಣೆ ಮಾಡುತ್ತಿರುವಾಗ ಸುಡುಮದ್ದಿನ ಬೆಂಕಿ ನನಗೆ ಮತ್ತು ಸ್ನೇಹಿತರಾದ ಭರತ್, ಕೌಶಿಕ್, ಸೌಮ್ಯ, ದೀಪಕ್, ಯಶವಂತ್, ಮೋಹನ್ ಎಂಬವರ ಮೇಲೆ ಬಿದ್ದಿತ್ತು. ಸುಡುಮದ್ದು ನಿರ್ವಹಣೆ ಮಾಡುವವರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಇತರರು ಸುಡುಮದ್ದು ಪ್ರದರ್ಶನ ವೇಳೆ ಅಗತ್ಯ ಮುಂಜಾಗ್ರತೆ ವ್ಯವಸ್ಥೆಯನ್ನು ಮಾಡಿಕೊಳ್ಳದೇ ನಿರ್ಲಕ್ಷತನ ತೋರಿರುವುದಾಗಿ ಆರೋಪಿಸಿ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




























