ದಿವಂಗತ ಮಹಮ್ಮದ್ ಹಟ್ಟಾ ರವರು ತನ್ನ ಎಳೆಯ ಪ್ರಾಯದಲ್ಲೇ ಪುತ್ತೂರು ಕಾಂಗ್ರೆಸ್ ನ ಸಂಘಟನೆಯಲ್ಲಿ ತೊಡಗಿಸಿಕೊಂಡವರು, ಕಾಂಗ್ರೆಸ್ ಕಚೇರಿಯ ಜವಾಬ್ದಾರಿ ವಹಿಸಿಕೊಂಡಿದ್ದ ಹಟ್ಟಾ ರವರು ಕಚೇರಿಗೆ ಬರುತ್ತಿದ್ದ ಕಾರ್ಯಕರ್ತರಲ್ಲಿ ಬಹಳ ನಯ ವಿನಯದಿಂದ ವರ್ತಿಸಿ ಕಾರ್ಯಕರ್ತರಲ್ಲಿ ಪಕ್ಷ ಸಂಘಟನೆ ಕೆಲಸ ನಡೆಸುವರೇ ಹುರುಪು ತುಂಬುತ್ತಿದ್ದರು, ಚುನಾವಣೆಯ ಸಂದರ್ಭದಲ್ಲಂತೂ ಕಚೇರಿಯಲ್ಲಿ ಕುಳಿತು ಚುನಾವಣ ಪ್ರಚಾರದ ಸಂಪೂರ್ಣ ರೂಪು ರೇಷಗಳನ್ನು ಸಿದ್ದಪಡಿಸುತ್ತಿದ್ದರು,ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿಯವರು ಹೇಳಿದರು.
ನಾನು ಪ್ರೈಮರಿ ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುತ್ತಿದ್ದೆ, ಆಗ ಹಟ್ಟಾರವರು ಪಕ್ಷದ ಕೆಲಸ ಮಾಡುಲು ನನಗೆ ಪ್ರೇರಣೆ ನೀಡುತ್ತಿದ್ದರು, ಇಡೀ ಪುತ್ತೂರು ಕಾಂಗ್ರೆಸ್ ನಲ್ಲಿ ನಡೆಯುತ್ತಿದ್ದ ಪಕ್ಷದ ಚಟುವಟಿಕೆ, ಸಂಘಟಣೆ ಕೆಲಸಗಳ ಮೂಲ ಪ್ರೇರಕ ಶಕ್ತಿಯಾಗಿದ್ದ ಮಹಮ್ಮದ್ ಹಟ್ಟಾರವರು ಪುತ್ತೂರು ಕಾಂಗ್ರೆಸ್ ಮರೆಯಲಾಗದ ಮಾಣಿಕ್ಯವಾಗಿರುತ್ತಾರೆ.
1986ರಲ್ಲಿ ನಡೆದ ದ ಕ ಜಿಲ್ಲಾ ಪರಿಷತ್ ನ ಜಿದ್ದಾ ಜಿದ್ದಿನ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಸೋಲಿಸಿ ಅತ್ಯಧಿಕ ಮತದಿಂದ ಆಯ್ಕೆ ಯಾದ ಹಟ್ಟಾರವರು ಜಿಲ್ಲಾ ಪರಿಷತ್ ಸದಸ್ಯರಾಗಿ, ಜಿಲ್ಲಾ ಪರಿಷತ್ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದವರಾಗಿರುತ್ತಾರೆ, ಪುತ್ತೂರು ಭೂನ್ಯಾಯ ಮಂಡಳಿಯ ಸದಸ್ಯರಾಗಿ ಇಂದಿರಾಗಾಂಧಿಯವರ ಉಳುವವನೆ ಹೊಲದೊಡೆಯ ಎಂಬ ಭೂ ಸುಧಾರಣೆ ಕಾನೂನಿನಡಿಯಲ್ಲಿ ಪುತ್ತೂರು ತಾಲೂಕಿನ ಸಾವಿರಾರು ಕುಟುಂಬಗಳಿಗೆ ಭೂ ಮಂಜೂರು ಆಗಲು ಕಾರಣಕರ್ತರಾಗಿರುವ ಮಹಮ್ಮದ್ ಹಟ್ಟಾ ರವರು ತನ್ನ ಸಾರ್ವಜನಿಕ ಜೀವನದಲ್ಲಿ ಬಹಳ ಪ್ರಾಮಾಣಿಕರಾಗಿದ್ದರು, ಎಂದ ಅಲಿಯವರು ಓರ್ವ ಸರಳ ಸಜ್ಜನ ರಾಜಕಾರಣಿಯಾಗಿರುವ ಮಹಮ್ಮದ್ ಹಟ್ಟಾ ರವರು ನಮ್ಮನ್ನು ಅಗಲಿ ಇಂದಿಗೆ 9 ವರ್ಷ ಆಗಿದೆ, ಈ ಸಂದರ್ಭದಲ್ಲಿ ಅವರನ್ನು ಸ್ಮರಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ ವಾಗಿದೆ ಎಂದು ಅಲಿಯವರು ತಿಳಿಸಿದರು.