ಪುತ್ತೂರು: ನರಿಮೊಗರು ಗ್ರಾಮದ ಪ್ರಗತಿಪರ ಕೃಷಿಕ ಈಶ್ವರ ಪೂಜಾರಿ(88) ಪೆರಿಯಡ್ಕ ಅನಾರೋಗ್ಯದಿಂದಾಗಿ ತಮ್ಮ ಸ್ವಗೃಹದಲ್ಲಿ ಆ.11 ರಂದು ನಿಧನರಾದರು.

ಮೃತರು ಪುತ್ರರಾದ ಅಂತರ್ಜಲ ಪರಿಶೋಧಕರಾದ ರಾಜೀವ ಸುವರ್ಣ ಪೆರಿಯಡ್ಕ, ನಿವೃತ್ತ ಪೊಲೀಸ್ ಅಧಿಕಾರಿ ಶೀನಪ್ಪ ಪೂಜಾರಿ ಪೆರಿಯಡ್ಕ ಹಾಗೂ ಇಬ್ಬರು ಪುತ್ರಿಯರನ್ನು ಮತ್ತು ಮೊಮ್ಮಕ್ಕಳನ್ನು, ಬಂಧು-ಮಿತ್ರರನ್ನು ಅಗಲಿದ್ದಾರೆ.




























