ಪುತ್ತೂರು: ಆಕ್ಟಿವಾ ಹಾಗೂ ಪಿಕಪ್ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡ ಘಟನೆ ಪುತ್ತೂರು – ಸವಣೂರು ರಸ್ತೆಯ ಬೆದ್ರಾಳ ಜಂಕ್ಷನ್ ನಲ್ಲಿ ಆ.12 ರಂದು ನಡೆದಿದೆ.

ಪಿಕಪ್ ವಾಹನಕ್ಕೆ ಆಕ್ಟಿವಾ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಆಕ್ಟಿವಾ ಸವಾರ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಸವಾರನನ್ನು ಆಶಿಕ್ ಎಂದು ಗುರುತಿಸಿಲಾಗಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
