ಪುತ್ತೂರು: ಕೆಯ್ಯೂರು ಗ್ರಾಮದ ಬೊಳಿಕ್ಕಲ ಕಿನ್ಯಾನ ನಿವಾಸಿ ರಿಕ್ಷಾ ಚಾಲಕ ಸುಜಿತ್ (23ವ)ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಆ.12 ರಂದು ವರದಿಯಾಗಿದೆ.
ಕಿನ್ಯಾನ ಶೀನಪ್ಪ ರೈಯವರ ಪುತ್ರರಾಗಿದ್ದ ಸುಚೇತ್‌ರವರು ರಿಕ್ಷಾ ಚಾಲಕರಾಗಿದ್ದ ಮಾಡಾವು ಕಟ್ಟೆ ಬಳಿ ರಿಕ್ಷಾ ಬಾಡಿಗೆ ನಡೆಸುತ್ತಿದ್ದರು. ಇವರು ಮನೆಯ ಕೋಣೆಯೊಳಗೆ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ತಾಯಿ, ಮೂವರು ಅಕ್ಕಂದಿರನ್ನು ಅಗಲಿದ್ದಾರೆ.