ಪುತ್ತೂರು: ಸಾಕು ಪ್ರಾಣಿಗಳ ಮೇಲಿನ ಪ್ರೀತಿ ಎಷ್ಟರ ಮಟ್ಟಿಗೆ ಇರಬಹುದು ಎಂಬುದಕ್ಕೆ ಇಲ್ಲೊಂದು ಭಾವನಾತ್ಮಕ ಉದಾಹರಣೆ ಸಿಕ್ಕಿದೆ. ಪುತ್ತೂರಿನ ಮುರ ಪೋಳ್ಯ ಮಠದ ಸಮೀಪ ವಾಸಿಸುವ ಗಣೇಶ್ ಕೇರ ಅವರ ಮನೆಯಲ್ಲಿ ಪ್ರೀತಿಯಿಂದ ಸಾಕುತ್ತಿದ್ದ ‘ಚಿನ್ನು’ ಎಂಬ ಶ್ವಾನ ಕಳೆದ ವಾರದಿಂದ ಕಾಣೆಯಾಗಿದ್ದು, ಅದರ ಹುಡುಕಾಟಕ್ಕಾಗಿ ಕುಟುಂಬ ತೀವ್ರ ಪ್ರಯತ್ನ ನಡೆಸುತ್ತಿದೆ.
ಮನೆಯ ಗೇಟ್ ತೆರೆದಿದ್ದ ವೇಳೆ ಹೊರಗೆ ಹೋದ ಚಿನ್ನು ಬಳಿಕ ಮನೆಗೆ ಮರಳಿಲ್ಲ. ಈ ಘಟನೆ ಬಳಿಕ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಶ್ವಾನವನ್ನು ಪತ್ತೆಹಚ್ಚಲು ಹಲವು ಕಡೆಗಳಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲಾಗುತ್ತಿದೆ.
ಈ ಹಿಂದೆ ಚಿನ್ನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ ಚಿಕಿತ್ಸೆ ಬಳಿಕ ಗುಣಮುಖವಾಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ತಮ್ಮ ಪ್ರೀತಿಯ ಶ್ವಾನವನ್ನು ಮರಳಿ ಪಡೆಯುವ ಉದ್ದೇಶದಿಂದ ಚಿನ್ನುವಿನ ಬಗ್ಗೆ ಮಾಹಿತಿ ನೀಡುವವರಿಗೆ ಅಥವಾ ಹುಡುಕಿಕೊಡುವವರಿಗೆ ₹50 ಸಾವಿರ ಬಹುಮಾನ ನೀಡುವುದಾಗಿ ಗಣೇಶ್ ಕೇರ ಘೋಷಿಸಿದ್ದಾರೆ.
ಚಿನ್ನು ಕಂಡುಬಂದಲ್ಲಿ ಅಥವಾ ಅದರ ಬಗ್ಗೆ ಮಾಹಿತಿ ದೊರೆತಲ್ಲಿ 9343542678 ಸಂಖ್ಯೆಯನ್ನು ಸಂಪರ್ಕಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


























