ಪುತ್ತೂರು: ನರಿಮೊಗರು ವಲಯ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು ವಲಯ ಅಧ್ಯಕ್ಷ ಪ್ರಕಾಶ್ ಪುರುಷರಕಟ್ಟೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಲಾಯಿತು. ಪ್ರತಿಯೊಂದು ಬೂತ್ ಗೆ ಸಮಿತಿ ರಚಿಸಲು ತೀರ್ಮಾನಿಸಲಾಯಿತು.
ಮಾಜಿ ವಲಯ ಅಧ್ಯಕ್ಷ ಬೇಬಿಜಾನ್ ರವರು ಮಾತನಾಡಿ, ಈ ಹಿಂದೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿರುವುದರಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷವು ಅಧಿಕಾರ ಹಿಡಿಯಲು ಹಿನ್ನಡೆಯಾಗಿರುತ್ತದೆ. ಇದೇ ರೀತಿ ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಲು ಬಂಡಾಯ ಅಭ್ಯರ್ಥಿ ಸ್ಪರ್ಧಿಸಿದರೆ, ಬ್ಲಾಕ್ ಕಾಂಗ್ರೆಸ್ ನ ನಿಲುವೇನು.. ಎಂದು ಅಧ್ಯಕ್ಷರಲ್ಲಿ ಪ್ರಶ್ನಿಸಿದಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈಯವರು ಉತ್ತರಿಸುತ್ತಾ ಈ ಹಿಂದಿನ ವಿಚಾರ ನನಗೆ ಗೊತ್ತಿಲ್ಲ, ಆದರೆ ಇನ್ನು ಮುಂದಕ್ಕೆ ಪಕ್ಷದ ವಿರುದ್ಧ ಸ್ಪರ್ದಿಸಿದವರನ್ನು ಯಾವುದೇ ಮುಲಾಜಿಲ್ಲದೆ ಪಕ್ಷದಿಂದ ಉಚ್ಚಾಟಿಸಲಾಗುವುದು, ಪಕ್ಷದಲ್ಲಿ ಶಿಸ್ತು ಮುಖ್ಯ,
ಪಕ್ಷದಲ್ಲಿ ನಿಷ್ಠಾವಂತರಾಗಿರುವವರು ಮಾತ್ರ ಇದ್ದರೆ ಸಾಕು ಎಂದು ಹೇಳಿದ ಅವರು ಬ್ಲಾಕ್ ಕಾಂಗ್ರೆಸ್ ಯಾವುದೇ ಅಭ್ಯರ್ಥಿಗಳನ್ನು ಮೇಲಿಂದ ಹೇರುವುದಿಲ್ಲ, ಬೂತ್ ಸಮಿತಿ, ವಲಯ ಸಮಿತಿಯವರು ಸೂಚಿಸಿದ ವ್ಯಕ್ತಿಗೆ ಮಾತ್ರ ಸ್ಪರ್ದಿಸಲು ಬಿ ಫಾರಂ ನೀಡಲಾಗುವುದು ಎಂದು ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಮಾತನಾಡಿ ಬಿಜೆಪಿ ಸರಕಾರವು ಜನರು ದಿನನಿತ್ಯ ಉಪಯೋಗಿಸುತ್ತಿರುವ ವಸ್ತುಗಳಿಗೆ ವಿಪರೀತ ಬೆಲೆ ಏರಿಕೆ ಮಾಡಿ ಜನರ ಬದುಕನ್ನು ದುಸ್ಥರ ಗೊಳಿಸಿರುವ ಬಗ್ಗೆ ಕಾರ್ಯಕರ್ತರು ಜನತೆ ತಿಳಿಸುವ ಕೆಲಸ ಮಾಡಬೇಕು,
ವಿದ್ಯುತ್ ಬೆಲೆ ಏರಿಕೆ ಮಾಡಿ ಜನರಿಗೆ ತೊಂದರೆ ಕೊಡುತ್ತಿರುವ ಕುರಿತು ಹಾಗೂ ವಿದ್ಯುತ್ ಯೋಜನೆಯನ್ನು ಖಾಸಗೀಕರಣ ಗೊಳಿಸುವ ಮೋದಿ ಸರಕಾರದ ತೀರ್ಮಾನದಿಂದ ರೈತರಿಗೆ, ಬಡವರಿಗೆ ಆಗುವ ತೊಂದರೆ ಮತ್ತು ಅದರ ದುಷ್ಟರಿಣಾಮದ ಬಗ್ಗೆ ಜನ ಜಾಗೃತಿ ಮೂಡಿಸ ಬೇಕಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರರವರು ಮಾತನಾಡಿ, ಬಿಜೆಪಿಯ ಮೋದಿ ಸರಕಾರ ಕಾಂಗ್ರೆಸ್ 70 ವರ್ಷದಲ್ಲಿ ಸ್ಥಾಪಿಸಿದಂತಹ ಸರಕಾರದ ಸಂಸ್ಥೆಯನ್ನು ಅಂಬಾನಿ ಮತ್ತು ಅದಾನಿ ಯಂತಹ ಶ್ರೀಮಂತರಿಗೆ ಮಾರಾಟ ಮಾಡಿ ದೇಶದ ಜನರಿಗೆ ದ್ರೋಹ ಎಸಗುತ್ತಿದೆ, ಆ ಬಳಿಕ ಬಿಜೆಪಿ ಅಂಧ ಭಕ್ತರು ಕಾಂಗ್ರೆಸ್ ದೇಶಕ್ಕಾಗಿ ಏನು ಮಾಡಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ, ಇದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಆದಷ್ಟು ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಜನರಿಗೆ ಮಾಡಿರುವ ಯೋಜನೆ ಹಾಗೂ ದೇಶಕ್ಕಾಗಿ ಮಾಡಿರುವ ಸೇವೆಯ ಕುರಿತು ಮಾಹಿತಿ ನೀಡುವುದರ ಮೂಲಕ ಸುಳ್ಳು ಪ್ರಚಾರ ಮಾಡುತ್ತಿರುವ ಬಿಜೆಪಿಗರಿಗೆ ಸರಿಯಾದ ತಿರುಗೇಟು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ, ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೋನ್ ಸಿಕ್ವೆರಾ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸಂತೋಷ ಕುಮಾರ್ ಭಂಡಾರಿ ಚಿಲ್ಮೆತಾರ್,ನರಿಮೊಗರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಮನಿಯ, ವಲಯ ಕಾಂಗ್ರೆಸ್ ಪದಾಧಿಕಾರಿಗಳಾದ ಅಝೀಜ್ ನೆರಿಗೇರಿ,ಇಲ್ಯಾಸ್ ಮನಿಯ, ಸುಬ್ರಮಣ್ಯ ಪಿ ಕೆ, ಚೆನ್ನಪ್ಪಗೌಡ, ಶ್ರೀಮತಿ ಪೂಜಾ ವಸಂತ, ಹರೀಶ್ ದೇವಾಡಿಗ ಮನಿಯ, ಜಮಾಲ್ ಎಂ ಎ ಪಿ ಕೆ, ಅವಿನಾಶ್ ಮೊಂತೆರೋ, ಹಸನ್ ಅಳಕೆ,ಶ್ರೀಮತಿ ಹರಿಣಾಕ್ಷಿ, ರಫೀಕ್ ಮನಿಯ, ನಾಸಿರ್ ಮುಕ್ವೆ, ಮಂಜುನಾಥ್ ಶೇಕ ಶಿಬಾರ, ವೆಲೇರಿಯಾನ್ ಥೋಮಸ್ ಮನಿಯ, ಸಂತೋಷ್ ಎಂ, ಸೋಮಪ್ಪ ಗೌಡ ಎಲಿಕ, ಅಬ್ದುಲ್ ರಝಕ್, ಶಾನ್ ಪಿ ಕೆ, ಹಮೀದ್ ನೆಕ್ಕಿಲು , ಷರೀಫ್ ಪಿ ಕೆ, ಇಲ್ಯಾಸ್ ಪಿ ಕೆ, ಇರ್ಷಾದ್ ಪಿ ಕೆ, ಅಲ್ತಾಫ್ ಪಿ ಕೆ, ಪಿ ಕಾರ್ತಿಕ್, ರಫೀಕ್ ಪಿ ಕೆ, ಅನ್ಸಾರ್ ಪಿ ಕೆ, ಲತೀಫ್ ನೆಕ್ಕಿಲು , ಅಶ್ರಫ್, ಸಮದ್ ಮಾಯಾಂಗಳ, ಮುಝಮ್ಮಿಲ್, ಝೆಮಿಲ್ ಝಿಯಂ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್, ಮಹಮ್ಮದ್ ಅಲಿ ಮತ್ತು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾದ್ಯಕ್ಷರಾಗಿ ನೇಮಕಗೊಂಡಿರುವ ರವೀಂದ್ರ ರೈ ನೆಕ್ಕಿಲು ಇವರನ್ನು ವಲಯ ಕಾಂಗ್ರೆಸ್ ವತಿಯಿಂದ ಗೌರವಿಸಲಾಯಿತು. ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಪುರುಷರ ಕಟ್ಟೆಯವರು ಸ್ವಾಗತಿಸಿದರು, ರವೀಂದ್ರ ರೈ ನೆಕ್ಕಿಲು ಕಾರ್ಯಕ್ರಮ ನಿರೂಪಣೆ ಮಾಡಿದರು.