ಪುತ್ತೂರು: ಬದ್ರಿಯಾ ಜುಮಾ ಮಸೀದಿ ಕೆಮ್ಮಾಯಿಯಲ್ಲಿ
75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ಜಮಾಅತ್ ಕಮಿಟಿ ಅಧ್ಯಕ್ಷರಾದ ಮೂಸ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಿತು. ಮೂಸ ಹಾಜಿ ದ್ವಜಾರೋಹಣಗೈದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಮಸೀದಿ ಮುದರ್ರಿಸರಾದ ಇರ್ಷಾದ್ ಸಖಾಫಿ ಸ್ವತಂತ್ರ್ಯಕ್ಕಾಗಿ ಮುಸ್ಲಿಂ ಉಲಮಾಗಳು ನಡೆಸಿದ ಹೋರಾಟವನ್ನು ವಿವರಿಸಿದರು.
ಸದರ್ ಮುಅಲ್ಲಿಂ ಅಬ್ದುಲ್ ಮಜೀದ್ ಉಸ್ತಾದ್ ಹಾಗೂ ಮಾಜಿ ಅಧ್ಯಕ್ಷರಾದ ಬಶೀರ್ ಹಾಜಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮುಹ್ಯಿಸ್ಸುನ್ನ ದರ್ಸ್ ವಿಧ್ಯಾರ್ಥಿ ನೌಫಲ್ , ಮುಹಮ್ಮದ್, ಹಾಗೂ ಇತರ ವಿದ್ಯಾರ್ಥಿಗಳು ಸ್ವಾತಂತ್ರ್ಯದ ಸಂದೇಶವನ್ನು ನೀಡಿದರು.
ವೇದಿಕೆಯಲ್ಲಿ ಜಮಾಅತ್ ಕಮಿಟಿ ಉಪಾಧ್ಯಕ್ಷರಾದ ಸಮುನು ಸ್ಟೈಲ್ ಪಾರ್ಕ್, ಹಸನ್ ಹಾಜಿ, ಕಾರ್ಯದರ್ಶಿ ಲತೀಫ್ ಹಾಜಿ, ಯಂಗ್ಮೆನ್ಸ್ ಅಧ್ಯಕ್ಷರಾದ ಇಸ್ಮಾಯಿಲ್ ಕೆಮ್ಮಾಯಿ ಉಪಸ್ಥಿತರಿದ್ದರು. ಅಝೀಝ್ ಟೋಪ್ಕೋ ಸ್ವಾಗತಿಸಿ, ವಂದಿಸಿದರು.