ಸುಳ್ಯ : ಭಗವದ್ಗೀತಾ ಶ್ರೇಷ್ಡ ಮತ್ತು ಪವಿತ್ರ ಗ್ರಂಥವಾಗಿದ್ದು ಜಗತ್ತಿನ ಗ್ರಂಥವಾಗಿದೆ. ಎಲ್ಲಾರು ಇದನ್ನು ಕೊಂಡು ಓದಿ ಎಂದು ಅಜ್ಜಾವರ ದೇವರಕಳಿಯ ಚೈತನ್ಯ ಸೇವಾಶ್ರಮದ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮಿ ಹೇಳಿದರು.ಅವರು ತನ್ನ ಆಶ್ರದಲ್ಲಿ ಗೀತಾಜಯಂತಿ ಆಚರಣೆ ಕಾರ್ಯಕ್ರಮ ತನ್ನ 175ನೇ ಕ್ರತಿ ಪ್ರಕ್ರತಿ ಪುರುಷ ಬಿಡುಗಡೆ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.
ಭಗವದ್ಗೀತೆ ಜೀವನಕ್ಕೆ ಬೇಕಾದ ಆದರ್ಶಗುಣಗಳನ್ನು ಒಳಗೊಂಡಿದ್ದು ಇದನ್ನು ಜೀವನದಲ್ಲಿ ರೂಡಿಸಿಕೊಳ್ಳಿ.ಕೊರೊನೊ ಬೇರೆ ಬೇರೆ ರೀತಿಯಲ್ಲಿ ರೂಪಾಂತಾರಗೊಳ್ಳುತ್ತಿದ್ದು ಎಲ್ಲಾರು ಯೋಗ ಪ್ರಾಣಾಯಮದದಲ್ಲಿ ತೊಡಗಿಸಿಕೊಳ್ಳಿ.
ಹೋಮಹವಣಾಧಿ ಮಾಡಿ ಇದರಿಂದ ಕೊರೊನೊ ರೋಗದಿಂದ ಪಾರಾಗಬಹುದು ಎಂದು ಅವರು ಹೇಳಿದರು.ಸುಳ್ಯ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆದರ್ಶ ಸ್ವಾಮಿಜಿಯವರ ಕ್ರತಿ ಬಿಡುಗಡೆಗೊಳಿಸಿ ಮಾತನಾಡಿದರು. ಹಿರಿಯರಾದ ಜನಾರ್ಧನ ಮಾಸ್ತರ್,ಕೆ.ವಿ.ಜಿ ತಾಂತ್ರಿಕ ಮಹಾವಿದ್ಯಾಲಯದ ಪ್ರೊ.ಅನೀಲ್ ಬಿ.ವಿ,ಆಶ್ರಮದ ಟ್ರಸ್ಟಿ ಪ್ರಣವಿ ಉಪಸ್ಥಿರಿದ್ದರು.ಈ ಸಂದರ್ಭದಲ್ಲಿಭಜನಾ ಸತ್ಸಂಗ, ಮಾ.ಅನಿಂದ್ಯಶ್ಯಾಮ್ ಸಾತ್ವಿಕ್ ನಿಂದ ಕೊಳಲುವಾದನ ನಡೆಯಿತು.