ಪುತ್ತೂರು: ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ ಕೊಂಬೆಟ್ಟು ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಸುಬೆದಾರ್ ಉಮೇಶ್, ಮಾಜಿ ಪುರಸಭಾ ಸದಸ್ಯರಾದ ಶಶಿಕಲಾ ಏಳ್ಮುಡಿ ಹಾಗೂ ಕಾರ್ತಿಕ್ ಕಂಬಳಕೋಡಿ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕರ್ತರಾದ ಗೋಪಾಲ್ ನಾಯ್ಕ್ ಏಳ್ಮುಡಿ, ಮಹಾಲಿಂಗೇಶ್ವರ ಯುವಕ ಮಂಡಲದ ಗೌರವಾಧ್ಯಕ್ಷರಾದ ಶ್ರೀಕಾಂತ್ ಕಂಬಳಕೋಡಿ, ಅಧ್ಯಕ್ಷರಾದ ತೇಜಸ್ ಕೊಂಬೆಟ್ಟು, ಉಪಾಧ್ಯಕ್ಷರಾದ ಕೃಷ್ಣಪ್ಪ ಕಂಬಳಕೋಡಿ, ಕಾರ್ಯದರ್ಶಿ ರಾಜೇಶ್ ಕೊಂಬೆಟ್ಟು, ಜೊತೆ ಕಾರ್ಯದರ್ಶಿ ದಿವಾಕರ ಚಿಕ್ಕಪುತ್ತೂರು, ಖಜಾಂಚಿ ಸಂದೀಪ್ ಕಂಬಳಕೋಡಿ, ಸದಸ್ಯರಾದ ಅಶ್ವಿನ್, ಪ್ರದೀಪ್,ತಿಲಕ್, ದಿವಾಕರ ಕಂಬಳಕೋಡಿ, ಶಮಂತ್,ತಿಲಕ್ ರಾಜ್, ಸಂತೋಷ್, ಕಾರ್ತಿಕ್ ಉದಯಶಂಕರ್, ಉಪಸ್ಥಿತರಿದ್ದರು.