ಪುತ್ತೂರು: ಹಿಂದೂ ಜಾಗರಣ ವೇದಿಕೆ ವತಿಯಿಂದ ಭಾರತ ಮಾತಾ ಪೂಜಾನ ಕಾರ್ಯಕ್ರಮವೂ ಅಡ್ಯಲಾಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಶೆಟ್ಟಿ ಮಾಣಿ, ಇಂದು ನಾವು 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಬೆಳಿಗ್ಗೆಯಿಂದಲೇ ಸಂಭ್ರಮದಿಂದ ಓಡಾಟವನ್ನು ಮಾಡಿಕೊಂಡು ಸಂತೋಷದಿಂದ ಈ ದಿನವನ್ನು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮದೇ ಜಿಲ್ಲೆ ಯಾವುದೋ ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿ ಅಲ್ಲ, ನಮ್ಮದೇ ದ.ಕ ಜಿಲ್ಲೆಯ ಕಬಕ ಎನ್ನುವಂತಹ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳು, ಅಧ್ಯಕ್ಷರು ಎಲ್ಲಾ ಸೇರಿಕೊಂಡು ಸರ್ಕಾರದ ಸುತ್ತೋಲೆಯ ಪ್ರಕಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ವೀರರ ಭಾವಚಿತ್ರವಿರುವ ರಥ ಹೊರಟ್ಟಿತ್ತು ಈ ಸಂದರ್ಭದಲ್ಲಿ ಯಾರೋ 5,6 ಜನ ಕಿಡಿಗೇಡಿಗಳು, ಎಸ್. ಡಿ. ಪಿ. ಐ ಚೇಲಗಳು ಮೆರವಣಿಗೆಯನ್ನು ತಡೆದು ದೇಶದ್ರೋಹದ ಘೋಷಣೆಯನ್ನು ಕೂಗಿ ಗ್ರಾಮ ಪಂಚಾಯತ್ ವಿರುದ್ಧ ಘೋಷಣೆಯನ್ನು ಕೂಗಿ ಅದರಲ್ಲಿದ್ದ ಸಾರ್ವಕರ್ ಭಾವಚಿತ್ರವನ್ನು ತೆಗೆಯಬೇಕು, ಇಲ್ಲವಾದಲ್ಲಿ ಟಿಪ್ಪುವಿನ ಭಾವಚಿತ್ರವನ್ನು ಇಡಬೇಕು ಎನ್ನುವ ಘೋಷಣೆಯನ್ನು ಕೂಗಿದ್ದಾರೆ.
ದೇಶದ ಸಾವಿರಾರು ಯುವಕರಿಗೆ ಆದರ್ಶ ಪ್ರಯವಾಗಿರುವ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸಾರ್ವಕರ್ ಈ ದೇಶದ ಆಸ್ತಿ, ‘ನಮ್ಮೆಲ್ಲರ ಸ್ವಾಭಿಮಾನದ ಪ್ರತೀಕ, ಸಾವಿರ ವರ್ಷಗಳು ಕಳೆದರು ಕೂಡಾ ಸ್ವಾತಂತ್ರ್ಯ ವೀರ ಸಾರ್ವಕರ್ ನಾವು ದೇವರು ಎಂದು ಪೂಜಿಸುವ ವ್ಯಕ್ತಿ’, ಯಾಕಂದ್ರೇ ಎರಡು ಎರಡು ಬಾರಿ ಜೀವಾವಧಿ ಶಿಕ್ಷೆಯನ್ನು ಅನುಭವಿಸಿಕೊಂಡು ಈ ಮಣ್ಣಿನ ಋಣವನ್ನು ತೀರಿಸುವುದಕೋಸ್ಕರ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ವ್ಯಕ್ತಿ. ಅವರಿಗೇ ಅವಮಾನ ಮಾಡಿದ ಎಸ್.ಡಿ.ಪಿ.ಐ ಕಾರ್ಯಕರ್ತರ ಈ ನಡೆ ಖಂಡನೀಯವಾಗಿದೆ ಎಂದರು.
ಭಾರತದ ಸ್ವಾತಂತ್ರ್ಯ ಸೇನಾನಿ, ಬರಹಗಾರ, ಕವಿ, ಕ್ರಾಂತಿಕಾರಿಗಳ ಕಮಾಂಡರ್, ಹಿಂದೂ ರಾಷ್ಟ್ರೀಯವಾದಿ, ಉತ್ಸಾಹಭರಿತ ದಾರ್ಶನಿಕ ಮತ್ತು ಸಕ್ರಿಯ ಸುಧಾರಣಾವಾದಿ ಎಂದು ಹೆಸರು ಗಳಿಸಿರುವ ವಿನಾಯಕ್ ದಾಮೋದರ್ ಸಾವರ್ಕರ್ ಅವರಿಗೆ ಕಬಕದಲ್ಲಿ ಅಪಮಾನ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯನಲ್ಲೂ ದೇಶ ಪ್ರೇಮ ಬೆಳಸುವ ನಿಟ್ಟಿನಲ್ಲಿ ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ಆ.17ರಂದು ಪುತ್ತೂರಿನಲ್ಲಿ ಜನ ಜಾಗೃತಿ ರಥ ಯಾತ್ರೆ ನಡೆಯಲಿದೆ ಎಂದು ಹಿಂದು ಜಾಗರಣ ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ ಘೋಷಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಮಾತೃ ಸುರಕ್ಷಾ ಪ್ರಮುಖ್ ಗಣರಾಜ್ ಭಟ್, ವಿಭಾಗ ಕಾರ್ಯದರ್ಶಿ ಚಿನ್ಮಯ್ ರೈ ಈಶ್ವರಮಂಗಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಜಿಲ್ಲಾ ಮಾತೃ ಸುರಕ್ಷಾ ಪ್ರಮುಖ್ ರಾಜೇಶ್ ಪಂಚೋಡಿ, ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜ ನಗರ, ಅವಿನಾಶ್, ಸಂಪರ್ಕ ಪ್ರಮುಖ್ ದಿನೇಶ್, ನಗರ ಅಧ್ಯಕ್ಷ ಪುಷ್ಪರಾಜ್ ದರ್ಬೆ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.